ಮಕ್ಕಳ ಕವಿತೆ:

 ಮಕ್ಕಳ ಕವಿತೆ:



ಕೂಡಿ ಹೇಳೋಣ ಬಾ..


ಒಂದು ಎರಡು ಸೇರಿದ್ರೆ 

ಮೂರು ಆಗುತ್ತೆ 

ತೆಂಗಿನ ಕಾಯಿ ಜುಟ್ಟು ತೆಗುದ್ರೆ

ಮೂರು ಕಣ್ಣು ಕಾಣಣ್ಣ


ಎರಡು ಮೂರು ಸೇರಿದ್ರೆ 

ಐದು ಆಗುತ್ತೆ 

ಹಸ್ತ ಅಗಲ ಮಾಡಿದ್ರೆ 

ಐದು ಬೆರಳು ಕಾಣಣ್ಣ


ಮೂರು ನಾಲ್ಕು ಸೇರಿದ್ರೆ 

ಏಳು ಆಗುತ್ತೆ 

ಕ್ಯಾಲೆಂಡರ್ ನಲ್ಲಿ ವಾರಕ್ಕೆ 

ಏಳು ದಿನಗಳು ಕಾಣಣ್ಣ


ನಾಲ್ಕು ಐದು ಸೇರಿದ್ರೆ 

ಒಂಭತ್ತು ಆಗುತ್ತೆ 

ಗ್ರಹಗಳು ಎಣಿಸಿ ನೋಡಿದ್ರೆ 

ಒಂಭತ್ತು ಕಾಣಣ್ಣ


ಐದು ಆರು ಸೇರಿದ್ರೆ 

ಹನ್ನೊಂದು ಆಗುತ್ತೆ 

ಹನ್ನೊಂದಕ್ಕೆ ಮತ್ತೊಂದು 

ಹನ್ನೆರಡು ತಿಂಗಳು ಕಾಣಣ್ಣ


ಉದಂತ ಶಿವಕುಮಾರ್ 

ಕವಿ ಮತ್ತು ಲೇಖಕ 

ಬೆಂಗಳೂರು -560056

ಮೊಬೈಲ್ ನಂ:9739758558

Image Description

Post a Comment

0 Comments