* ಕವಿತೆ*


 "ಇದು ಕವಿತೆಯ ಸೌಂದರ್ಯ ತೋರುವ ಸುಂದರ ಅಕ್ಷರಪ್ರಣತೆ. ಕವಿತೆಯ ಮಾಧುರ್ಯ ಸಾರುವ ಮಧುರ ಭಾವಗೀತೆ.. ಇಲ್ಲಿ ಕವಿತೆಯ ಜೀವ-ಭಾವಗಳ ಅನಾವರಣವಿದೆ. ಕಾವ್ದದ ಭಾವ-ಭಾಷ್ಯಗಳ ಅನುರಣನವಿದೆ. ಭಾವಸಂವೇದನೆ, ಕಾವ್ಯನಿವೇದನೆ, ಅಕ್ಷರಾರಧನೆಯ  ತ್ರಿವೇಣಿ ಸಂಗಮವೇ, ಕವಿತೆಯ ಮೇಲಿನ ಈ ಕವಿತೆ. ಏನಂತೀರಾ..?" - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.


ಕವಿತೆ.!


ಭಾವದ ಭಾರಕ್ಕೆ

ಭಾಷೆ ಕುಸಿಯದಂತೆ

ಕೊನರಬೇಕು ಕವಿತೆ.!


ಭಾಷೆಯ ವೈಭವಕ್ಕೆ

ಭಾವ ಬಾಡದಂತೆ

ಅರಳಬೇಕು ಕವಿತೆ.!


ಭಾಷೆ-ಭಾವ ಜುಗಲ್ಬಂಧಿ

ಮೇಳದ ಮಧುರವಾಗಿ

ಮೂಡಬೇಕು ಕವಿತೆ.!


ಲಯ ಲಾವಣ್ಯಗಳಲಿ

ನಯವಾಗಿ ಬಳುಕಿ

ಬೀಗಬೇಕು ಕವಿತೆ.!


ಲಾಸ್ಯ ಲಾಲಿತ್ಯಗಳಲಿ

ಬೆಳಕ ಪ್ರಹರಿಯಾಗಿ

ಮಿನುಗಬೇಕು ಕವಿತೆ.!


ರಾಗ ರಂಜನೆಗಳಲಿ

ನಾದ ಲಹರಿಯಾಗಿ

ಹರಿಯಬೇಕು ಕವಿತೆ.!


ನಲುಮೆ ಒಲುಮೆಗಳಲಿ

ಚೈತನ್ಯ ಚಿಲುಮೆಯಾಗಿ

ಉಲಿಯಬೇಕು ಕವಿತೆ.!


ಎ.ಎನ್.ರಮೇಶ್. ಗುಬ್ಬಿ.

Image Description

Post a Comment

0 Comments