* ಪಿ.ಎಸ್. ಸಜ್ಜನ ಮಹಾವಿದ್ಯಾಲಯದಲ್ಲಿ ಸಂವಿಧಾನ ದಿನ ಆಚರಣೆ *

 ಪಿ.ಎಸ್. ಸಜ್ಜನ ಮಹಾವಿದ್ಯಾಲಯದಲ್ಲಿ ಸಂವಿಧಾನ ದಿನ ಆಚರಣೆ



ಬೇವೂರ : ಸಂವಿಧಾನ ಅಂಗೀಕಾರವಾದ ಐತಿಹಾಸಿಕ ದಿನವನ್ನು ಸ್ಮರಿಸುವ ಸಲುವಾಗಿ ಸಂವಿಧಾನದ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವ ಸಲುವಾಗಿ ಆಚರಿಸಲಾಗುವ ಸಂವಿಧಾನ ದಿನ ಮಹತ್ವದ ಆಚರಣೆಯಾಗಿದೆ ಎಂದು ಬೇವೂರಿನ ಪಿ.ಎಸ್.ಎಸ್ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಎನ್. ಬಿ. ಬೆಣ್ಣೂರ ಹೇಳಿದರು. ಆ.ವಿ.ವ ಸಂಘದ ಶ್ರೀ ಪರಪ್ಪ ಸಜ್ಜನ ಕಲಾ ಮಹಾವಿದ್ಯಾಲಯದ ಎನ್.ಎಸ್.ಎಸ್ ಹಾಗೂ ಐ.ಕ್ಯೂ.ಎ.ಸಿ ಘಟಕಗಳ ಸಹಯೋಗದಲ್ಲಿ ಜರುಗಿದ ಸಂವಿಧಾನ ದಿನದ ಕಾರ್ಯಕ್ರಮದ ಅತಿಥಿ ಸ್ಥಾನ ಅಲಂಕರಿಸಿ ಮಾತನಾಡಿದ ಅವರು ನ್ಯಾಯ, ಸ್ವಾತಂತ್ರ್ಯ ಸಮಾನತೆ, ಭ್ರಾತೃತ್ವದ ಮೌಲ್ಯಗಳನ್ನು ಎತ್ತಿ ಹಿಡಿದು ಪ್ರಜಾ ಕಲ್ಯಾಣ ಬಯಸಿದ ಸಂವಿಧಾನ ನಮ್ಮ ದೇಶದ್ದಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಪಿ.ಎಸ್.ಸಜ್ಜನ ಕಾಲೇಜಿನ ಮಹಿಳಾ ಸಬಲೀಕರಣ ಘಟಕದ ಸಂಚಾಲಕರಾದ ಎಸ್.ಎಸ್. ಆದಾಪೂರ ಭಾರತದ ಆಡಳಿತ ವ್ಯವಸ್ಥೆಗೆ ಭದ್ರಬುನಾದಿ ಹಾಕಿದ ಸಂವಿಧಾನವು ತನ್ನದೇಯಾದ ವಿಶಿಷ್ಟ ಲಕ್ಷಣಗಳನ್ನು ಒಳಗೊಂಡಿದ್ದು; ಇಂತಹ ಸಂವಿಧಾನ ರೂಪುಗೊಳ್ಳಲು ಶ್ರಮಿಸಿದ ಎಲ್ಲಾ ಮಹನೀಯರ ಸಾರ್ಥಕ ಪರಿಶ್ರಮ ಪ್ರಜಾಪ್ರಭುತ್ವದ ಬೇರುಗಳನ್ನು ಗಟ್ಟಿಗೊಳಿಸುವಂತೆ ಮಾಡಿದೆ ಎಂದು ಹೇಳಿದರು. ಸಮಾರಂಭದ ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ. ಜಗದೀಶ ಗು. ಭೈರಮಟ್ಟಿ, ಕನ್ನಡ ಸಂಘದ ಸಂಚಾಲಕರಾದ ಡಾ. ಎಸ್.ಬಿ. ಹಂಚಿನಾಳ ಉಪಸ್ಥಿತರಿದ್ದರು. ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಜಿ.ಎಸ್. ಗೌಡರ ಸಂವಿಧಾನದ ಪೂರ್ವಪೀಠಿಕೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಸಾಂಸ್ಕೃತಿಕ ವಿಭಾಗದ ಸಂಚಾಲಕರಾದ ಡಿ. ವಾಯ್. ಬುಡ್ಡಿಯವರ ಸ್ವಾಗತಿಸಿದರು. ಐ.ಕ್ಯೂ.ಐ.ಸಿ ಘಟಕದ ಕಾರ್ಯಾಧ್ಯಕ್ಷರಾದ ಡಾ.ಎ.ಎಮ್. ಗೊರಚಿಕ್ಕನವರ ನಿರೂಪಿಸಿ, ವಂದಿಸಿದರು. ಕಾಲೇಜಿನ ವಿದ್ಯಾರ್ಥಿನಿಯರಾದ ವಿಜಯಲಕ್ಷ್ಮೀ,ಪಾತಿಮಾ, ಜ್ಯೋತಿ, ಪವಿತ್ರಾ ಸಂಗಡಿಗರು ಪ್ರಾರ್ಥಿಸಿದರು.

ವರದಿ : ಅಮರೇಶ.ಗೊರಚಿಕನವರ

(ಕೂಡಲಸಂಗಮ)

Image Description

Post a Comment

0 Comments