ನಿನ್ನದೇ ಧ್ಯಾನ
ಮಲ್ಲಿಗೆ ಹೂವಿನ ಪರಿಮಳಕೆ
ಸೋತಿದೆ ಈ ಮನ
ನಿನ್ನಯ ಚೆಲುವಿನ ಅಂದಕೆ
ಅರಳಿದೆ ಈ ಜೀವನ
ಗಾಳಿಲಿ ತೂಗುವ ಹೂವಿಗೆ
ಬೆಳ್ಳಿ ಚುಕ್ಕಿಯ ಸೊಬಗು
ನಿನ್ನಯ ಚೆಲುವಿನ ನಗುವಿಗೆ
ಬೆಳದಿಂಗಳ ಬೆಳಗು
ಕಾಲ್ಗೆಜ್ಜೆ ಝಣಕು ಶಬ್ಧಕ್ಕೆ
ಎದೆಯೊಳು ಮೂಡಿದೆ ಪ್ರೀತಿ
ನಿನ್ನಯ ಮೋಹಕ ಗಾನಕೆ
ಕತ್ತಲು ಕರಗಿದ ರೀತಿ
ಬಿಸಿಲಲ್ಲಿ ಬೀಸುವ ತಂಪು ಗಾಳಿಯಂತೆ
ಮೈದುಂಬಿದೆ ಪ್ರೀತಿ ಧ್ಯಾನ
ನಿನ್ನಯ ನಾಚಿದ ತುಟಿಯ ಮುತ್ತಿನಂತೆ
ಕಣ್ಣೊಳು ಒಲವಿನ ಬಾಣ
ಉದಂತ ಶಿವಕುಮಾರ್
ಕವಿ ಮತ್ತು ಲೇಖಕ
ಬೆಂಗಳೂರು -560056
ದೂರವಾಣಿ: 9739758558
ಮಲ್ಲಿಗೆ ಹೂವಿನ ಪರಿಮಳಕೆ
ಸೋತಿದೆ ಈ ಮನ
ನಿನ್ನಯ ಚೆಲುವಿನ ಅಂದಕೆ
ಅರಳಿದೆ ಈ ಜೀವನ
ಗಾಳಿಲಿ ತೂಗುವ ಹೂವಿಗೆ
ಬೆಳ್ಳಿ ಚುಕ್ಕಿಯ ಸೊಬಗು
ನಿನ್ನಯ ಚೆಲುವಿನ ನಗುವಿಗೆ
ಬೆಳದಿಂಗಳ ಬೆಳಗು
ಕಾಲ್ಗೆಜ್ಜೆ ಝಣಕು ಶಬ್ಧಕ್ಕೆ
ಎದೆಯೊಳು ಮೂಡಿದೆ ಪ್ರೀತಿ
ನಿನ್ನಯ ಮೋಹಕ ಗಾನಕೆ
ಕತ್ತಲು ಕರಗಿದ ರೀತಿ
ಬಿಸಿಲಲ್ಲಿ ಬೀಸುವ ತಂಪು ಗಾಳಿಯಂತೆ
ಮೈದುಂಬಿದೆ ಪ್ರೀತಿ ಧ್ಯಾನ
ನಿನ್ನಯ ನಾಚಿದ ತುಟಿಯ ಮುತ್ತಿನಂತೆ
ಕಣ್ಣೊಳು ಒಲವಿನ ಬಾಣ
ಉದಂತ ಶಿವಕುಮಾರ್
ಕವಿ ಮತ್ತು ಲೇಖಕ
ಬೆಂಗಳೂರು -560056
ದೂರವಾಣಿ: 9739758558
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments