ಪ್ರೇಮ ಹನಿಗವನ *ಸುರ ಸುಂದರಿ*

 ಪ್ರೇಮ ಹನಿಗವನ 

 *ಸುರ ಸುಂದರಿ*



ಸುಮದ ರಾಶಿಯಲಿ ಸುಕೋಮಲ ಬಾಲೆ

ಶೃಂಗಾರಗೊಂಡು ಕುಳಿತಿರುವ ಲೀಲೆ

ಚಕ್ಷುಗಳು ಬರೆಯುತಿವೆ ಅನುರಾಗದ ಓಲೆ 

ಅಂತರಂಗದಿ ಮೂಡಿರುವ ಭಾವಗಳ ಕಲೆ 


ಚಂದ್ರಕಿಯ ಸವರುತ್ತ ಮೈಮರೆತು ಕುಳಿತಿಹಳು

ಕೃಷ್ಣನ ಒಲವಿಗೆ ಮನಸೋತ ರಾಧೆಯಂದದೊಳು

ಜಗವನೆ ಮರೆತಿಹಳು ಅವ್ಯಕ್ತ ಭಾವದೊಳು

ಸುರಸುಂದರಿ ವನಿತೆ ಸಂಗಾತಿ ನೆನಪೊಳು


     ಗೊರೂರು ಜಮುನ

Image Description

Post a Comment

0 Comments