* ಡಾ. ಬಸು ಬೇವಿನಗಿಡದ ಅವರಿಗೆ ಕುವೆಂಪು ಭಾಷಾ ಭಾರತಿ ಅಕಾಡೆಮಿಯ ಗೌರವ ಪ್ರಶಸ್ತಿ *.

 ಡಾ. ಬಸು ಬೇವಿನಗಿಡದ ಅವರಿಗೆ ಕುವೆಂಪು ಭಾಷಾ ಭಾರತಿ ಅಕಾಡೆಮಿಯ ಗೌರವ ಪ್ರಶಸ್ತಿ.



       ಅನುವಾದ ಕ್ಷೇತ್ರದಲ್ಲಿನ ಸಾಧನೆಗಾಗಿ 2024 ನೇ ಸಾಲಿನ  ಕುವೆಂಪು ಭಾಷಾ ಭಾರತಿಯ ಗೌರವ ಪ್ರಶಸ್ತಿಗೆ ಆತ್ಮೀಯರಾದ ಡಾ. ಬಸು ಬೇವಿನಗಿಡದ ಅವರು ಪಾತ್ರರಾಗಿದ್ದಾರೆ.‌ 2023 ಸಾಲಿಗೆ 5 ಜನ ಲೇಖಕರು ಹಾಗೂ 2024 ನೇ ಸಾಲಿಗೆ 5 ಜನ ಲೇಖಕರು ಸೇರಿ ಒಟ್ಟು 10 ಜನರನ್ನು ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನಮ್ಮ ಭಾಗಕ್ಕೆ ಸಂದಿರುವ ದೊಡ್ಡ ಗೌರವ ಎನ್ನುವುದರಲ್ಲಿ ಎರಡು ಮಾತಿಲ್ಲ. ಬಸು ಬೇವಿನಗಿಡದ ಅವರು ಕತೆಗಾರ, ಕಾದಂಬರಿಕಾರ  ಹಾಗೂ ಅನುವಾದಕರಾಗಿ ಕಳೆದ ಮೂರು ದಶಕಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈವರೆಗೆ ಅವರ 11 ಹನ್ನೊಂದು ಅನುವಾದ ಕೃತಿಗಳು ಸೇರಿದಂತೆ ಒಟ್ಟು 36 ಪುಸ್ತಕಗಳು ಪ್ರಕಟವಾಗಿವೆ. 

ಡಾ. ಬಸು ಬೇವಿನಗಿಡದ ಅವರಿಗೆ ಅಭಿಮಾನದ ಅಭಿನಂದನೆಗಳು.

🌷🌷

Image Description

Post a Comment

0 Comments