ಇದು ನನಗೆ ತುಂಬಾ ಖುಷಿ ಕೊಟ್ಟ, ನನ್ನ ಅತ್ಯಂತ ಇಷ್ಟದ ದೀಪಗವನ
. ಈ ಹನಿಗವನದ ಆಳಕ್ಕಿಳಿದರೆ ಬಿಂದು ಬಿಂದುವಿನಲ್ಲು ಅರಿವಿನ ಸಿಂಧುವಿದೆ. ಜೀವನ ಸತ್ವ-ತತ್ವಗಳ ರಿಂಗಣವಿದೆ. ಬದುಕು ಬೆಳಕಿನ ಹೊಂಗಿರಣವಿದೆ. ಇದು ನಿಮಗೂ ಖಂಡಿತಾ ಇಷ್ಟವಾಗುತ್ತದೆ. ಏನಂತೀರಾ..? " - ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
ದೀಪ್ತಿ.!
ದೀಪ ಹಚ್ಚುತ್ತೇನೆ..
ನನ್ನ ಮನೆ ಮುಂದಷ್ಟೇ
ಶೋಭೆಯಾಗಲೆಂದು
ಕಡು ಸ್ವಾರ್ಥದಿಂದ.!
ಆ ನಿಷ್ಪಾಪಿ ದೀಪ
ಬೀದಿ ಹಾದಿಯುದ್ದಕ್ಕೂ
ಬೆಳಕ ಚೆಲ್ಲುತ ನಗುತ್ತದೆ
ಪೂರ್ಣ ನಿಸ್ವಾರ್ಥದಿಂದ.!!
ಎ.ಎನ್.ರಮೇಶ್. ಗುಬ್ಬಿ.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments