**ನಿಜಗುಣಯ್ಯ ಹೆಚ್.ಎಸ್. ರವರಿಗೆ 2024 ನೇ ಸಾಲಿನ ರಾಜ್ಯಮಟ್ಟದ ಕಾವ್ಯಶ್ರೀ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ.ಈ* **ಪ್ರಶಸ್ತಿಯನ್ನು ತಮ್ಮ ತಂದೆ ತಾಯಿ* *ಹಾಗೂ ನೆಚ್ಚಿನ ವಿದ್ಯಾರ್ಥಿಗಳಿಗೆ ಅರ್ಪಣೆ*
**
ತುರುವೇಕೆರೆ ತಾಲ್ಲೂಕಿನ ಮೂಲದ, ಪ್ರಸ್ತುತ ತಿಪಟೂರು ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಜಗುಣಯ್ಯ ಹೆಚ್.ಎಸ್. ರವರಿಗೆ, 2024ನೇ ಸಾಲಿನ ರಾಜ್ಯಮಟ್ಟದ ಕಾವ್ಯಶ್ರೀ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು. ನೀಡಿ ಗೌರವಿಸಲಾಗಿದ್ದು,ಅವರ ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಸಕ್ರಿಯ ಮತ್ತು ಪ್ರಾಮಾಣಿಕ ಸೇವೆಗಾಗಿ ಸಿಕ್ಕಿದ ಮಾನ್ಯತೆ.
ನಿಜಗುಣಯ್ಯ ಅವರು, ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ, ಕಂಪಾರಹಳ್ಳಿಯ ಸರ್ಕಾರಿ ಡಾ. ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿದ್ದು, ಸಂಪನ್ಮೂಲ ವ್ಯಕ್ತಿಯಾಗಿ ಕೂಡ ಕೆಲಸಮಾಡುತ್ತಿದ್ದಾರೆ. ಅವರು ತಮ್ಮ ಶ್ರದ್ಧೆ, ಶ್ರಮ, ಮತ್ತು ಸಮರ್ಪಣೆಯಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಸೂಕ್ತ ಮಾರ್ಗದರ್ಶನ ನೀಡುತ್ತಾ, ಶಾಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ತಮ್ಮ ವಿದ್ಯಾದಾನದಿಂದ ಶ್ರೇಷ್ಟ ಸಾಧಕರಾಗಿ, ವಿಶಿಷ್ಟ ಶಿಕ್ಷಕರಾಗಿ, ಮತ್ತು ವಿದ್ಯಾರ್ಥಿಗಳ ಅಚ್ಚು ಮೆಚ್ಚಿನ ಗುರುವಾಗಿದ್ದಾರೆ.
ಅವರ ಅನುಪಮ ಸೇವೆಯನ್ನು ಪರಿಗಣಿಸಿ, ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ (ರಿ)ಕರ್ನಾಟಕ ವತಿಯಿಂದ . ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಇಲ್ಲಿ ನಡೆದ ರಾಜ್ಯ ಮಟ್ಟದ ಕಾವ್ಯಶ್ರೀ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಿನಾಂಕ 3ನವೆಂಬರ್ 2024ರಂದು ರಾಜ್ಯ ಮಟ್ಟದ ಕಾವ್ಯಶ್ರೀ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರವನ್ನು ಶಿಕ್ಷಣ ಕ್ಷೇತ್ರದ ಸೇವೆಗಾಗಿ ನೀಡಿ ಗೌರವಿಸಲಾಯಿತು.
ಈಗಾಗಲೇ ಹಲವಾರು ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳನ್ನು ಪಡೆದಿರುವ ನಿಜಗುಣಯ್ಯ ಅವರಿಗೆ, ಈ ಹೆಮ್ಮೆಯ ಸಾಧನೆಗೆ ಶಾಲೆಯ ಪ್ರಾಂಶುಪಾಲರು, ಶಿಕ್ಷಕ ವೃಂದ, ಅಧಿಕಾರಿಗಳು, ಆತ್ಮೀಯ ಸ್ನೇಹಿತರು, ಮತ್ತು ವಿದ್ಯಾರ್ಥಿಗಳು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.
ಈ ಪ್ರಶಸ್ತಿಯನ್ನು ತಮ್ಮ ತಂದೆ ತಾಯಿ ಹಾಗೂ ನೆಚ್ಚಿನ ವಿದ್ಯಾರ್ಥಿಗಳಿಗೆ ಅರ್ಪಿಸಿದ್ದಾರೆ.
ವರದಿ :ಡಾ. ವಿಲಾಸ್ ಕಾಂಬಳೆ
ಕನ್ನಡ ಉಪನ್ಯಾಸಕರು
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments