*ಪ್ರಕೃತಿ ಸೊಬಗು*
ಪಡುವಣ ದಿಕ್ಕಲಿ ಪವಡಿಸಲ್ಹೊರಟನು
ಮೂಡಲ ಮನೆಯಾ ರವಿತೇಜ
ಬಾಂದಳ ತುಂಬಾ ಓಕುಳಿ ಚೆಲ್ಲುತ
ರಂಗನ ತಂದನು ಮಹಾರಾಜ/
ಹಸಿರಿನ ವನವದು ನಸ ನಗುತಿರುವುದು
ತುಹಿನವು ಸೋಕಲು ತರುಗಳಲಿ
ಹಸುಕರು ಮೇಯುತ ಉದರವು ತುಂಬಲು
ಖುಷಿಯಾಗಿವೆ ಗೋವ್ಗಳು ಹರುಷದಲಿ/
ಗಗನಕೆ ಚಾಚಿದ ವೃಕ್ಷವು ತೂಗುತ
ದಿನಕರಗ್ಹೇಳಿದೆ ನಮನವನು
ಮರುದಿನ ಮರಳುತ ಹರಿಸುವ ಕಿರಣಕೆ
ಕಾಯುವೆ ಎನ್ನುವ ವಿಷಯವನು/
ಪ್ರಕೃತಿ ಸೊಬಗನು ಸೂಸುವ ಚಿತ್ರವು
ಮನಸಿಗೆ ತಂದಿದೆ ಉಲ್ಲಾಸ
ಇಂತಹ ನೆಲಗಲಿ ಬದುಕುವ ಭಾಗ್ಯವೆ
ನಲ್ಮೆಯ ನೀಡುವ ಸಂತೋಷ//
ಗೊರೂರು ಜಮುನ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments