🙏🙏 *ಓಂ ಶ್ರೀ ಶಾರದಾ ಗುರುಭ್ಯೋ ನಮಃ* 🙏🙏
ಶೀರ್ಷಿಕೆ: *ಅಪ್ಸರೆ*
ದುಷ್ಯಂತನ ಶಾಕುಂತಲೆಯೇ
ವಿಶ್ವಾಮಿತ್ರನ ಮೇನಕೆಯೇ
ನಳ ಮಹಾರಾಜನ ದಮಯತಿಯೇ
ದುರ್ಯೋಧನನ ಭಾನುಮತಿಯೇ
ಯಾರೇ ಆಗಿರು ನನ್ ಹೃದಯದ ಒಲವೆ
ನಿನ್ನ ಮೇಲೆ ಪಂಚ ಪ್ರಾಣ ಇಟ್ಟಿರುವೆ
ಪಂಚಮ ವೇದದ ನಾದ ವಾಗಿರುವೆ
ಸಪ್ತ ಸಾಗರದಾಚೆ ಸಪ್ತ ಕೋಟೆಯಲ್ಲಿರುವೆ
ದೇವಲೋಕದ ಅಪ್ಸರೆ ಏಕೆ ಪ್ರಿಯೆ
ನನ್ನ ಮನ ದೋಚಿರುವ ಹೃದಯೇಶ್ವರಿಯೆ
ನೀ ಹೇಗಿದ್ದರೂ ನನಗೆ ಕೊಹಿನೂರ ವಜ್ರವಾಗಿಯೆ
ಬೆಲೆಕಟ್ಟಲು ಸಾಧ್ಯವಾಗ ದಂತಹ ರತ್ನ ಮಣಿಯೆ
ಬಾ ನನ್ನೆದೆಯಲ್ಲಿ ಬಂಧಿಸಿ ಜೋಪಾನ ಮಾಡುವೆ
ಯಾರ ದೃಷ್ಟಿಯು ತಾಕದಂತೆ ಗಲ್ಲಕೆ ಚುಕ್ಕಿ ಇಡುವೆ
ನನ್ನೊಲವಿನ ಮಹಾರಾಣಿ ಯಂತೆ ನೋಡಿಕೊಳ್ಳುವೆ
ಯನ್ನ ಮನವನಾಳೋ ದೊರೆಸಾನಿ ಅಲ್ಲವೆ
✍️ *ಮಳೆಬಿಲ್ಲು ಡಾ. ಲೀಲಾ ಗುರುರಾಜ್* ತುಮಕೂರು
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments