ಕವನದ ಶೀರ್ಷಿಕೆ...
ನಮ್ಮ ಸಂಸ್ಕೃತಿ ...
ನಮ್ಮ ಹೆಮ್ಮೆ ...
ನಾವೆಲ್ಲ ಒಂದೇ
ನಾಡ ನುಡಿಯ ಕಾಯಲೇಂದೆ
ನಮ್ಮ ಸಂಸ್ಕೃತಿ ಅಂದಿನಿಂದಲೂ ಚಂದವೊ ಚಂದ
ಕಲೆ ವೈಭವದ ಕೀರ್ತಿ ಬೆಳಗುವ ಹಲವು ಕಡೆ
ಜಾತಿ ಮತಗಳ ಒಳಗೆ ನಾವೆಲ್ಲ ಒಂದೇ ಎಂಬ ನಮ್ಮ
ಭಾವ ಕನ್ನಡಾಂಬೆಯ ಕಿರೀಟವಾಗಬೇಕು
ಹೆಜ್ಜೆ ಇಟ್ಟಲ್ಲೆಲ್ಲ ಹಚ್ಚಬೇಕು ಕನ್ನಡದಾ ದೀಪ
ಅಜ್ಞಾನದ ಕತ್ತಲೆಯ ಹೊಡೆದೋಡಿಸೋಣ
ನಾವೆಲ್ಲ ಒಂದಾಗಿ ಬಾಳೋಣ
ಸಹಕಾರದಿಂದ ಸಹಾಯದೊಂದಿಗೆ
ಒಂದಾಗಿ ಬಡತನ ಬಗ್ಗಿಸೋಣ
ಸಿರಿತನದ ಒಲವ ನಾಡಿನೊಳಗೆ ಕಟ್ಟೋಣ
ನಾವೆಲ್ಲ ಒಂದಾಗಿ
ಪ್ರತಿ ಮನೆಯಲ್ಲಿಯೂ ಬೆಳಗುವ ಹಣತೆಯಂತೆ
ಪ್ರತಿ ಮಕ್ಕಳಲ್ಲಿಯೂ ಕನ್ನಡದ ದೀಪ ಬೆಳಗಿಸೋಣ
ಕರುನಾಡ ಅನ್ನ ಕರುನಾಡ ಮಣ್ಣ
ಕಣ್ಗೋತ್ತಿ ಸ್ಮರಿಸೋಣ
ಕನ್ನಡದ ಬಾವುಟ ಪ್ರತಿಯೊಬ್ಬರ
ಮನೆ ಮನೆಗಳಲ್ಲಿ ಹಾರಾಡಲಿ ನಿತ್ಯ
ತಾಯಿಯ ನೆರಳಲ್ಲಿ
ಶಕ್ತಿಯಾಗಿ ಬಾಳಲಿ ಪ್ರತಿನಿತ್ಯ
ಶಕ್ತಿಯಾಗಿ ಬಾಳಲಿ ಪ್ರತಿನಿತ್ಯ
ಸರಿತ.ಹೆಚ್
ಕಾಡುಮಲ್ಲಿಗೆ...✍️...
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments