ರೈಲ್ವೆ ನೇಮಕಾತಿಗೆ ಕನ್ನಡದಲ್ಲಿ ಪರೀಕ್ಷೆ ಅಭಿನಂದನೆಗಳು: ಉದಂತ ಶಿವಕುಮಾರ್
ರೈಲ್ವೆ ನೇಮಕಾತಿ ಮಂಡಳಿ ನಡೆಸುವ ಸ್ಪರ್ದಾತ್ಮಕ ಪರೀಕ್ಷೆಗಳು ಇಲ್ಲಿಯವರೆಗೆ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ನಡೆಯುತ್ತಿದ್ದವು. ಈಗ ಕನ್ನಡದಲ್ಲಿ ಪರೀಕ್ಷೆ ನಡೆಸುತ್ತಿರುವ ಬಗ್ಗೆ ಸಂತೋಷವಾಗಿದೆ. ಇದರಿಂದ ಕನ್ನಡಿಗರಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ದೊರೆಯುವ ಅವಕಾಶವನ್ನ ಪಡೆಯಲು ಅನುಕೂಲವಾಗುತ್ತದೆ. ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಇರುವ ಪ್ರಶ್ನೆ ಪತ್ರಿಕೆಗಳನ್ನು ಕನ್ನಡಕ್ಕೆ, ಶಿಕ್ಷಣ ತಜ್ಞರಿಂದ ಅನುವಾದಿಸಿ ಪರೀಕ್ಷೆಯನ್ನು ನಡೆಸುವ ವಿಚಾರದಲ್ಲಿ ರೈಲ್ವೆ ಸಚಿವರಾದ ವಿ. ಸೋಮಣ್ಣನವರು ಗಮನ ಹರಿಸಬೇಕಾಗುತ್ತದೆ. ಈ ವ್ಯವಸ್ಥೆಯನ್ನ ಕಲ್ಪಿಸಿದ್ದಕ್ಕಾಗಿ ವಿ. ಸೋಮಣ್ಣನವರಿಗೆ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಉದಂತ ಶಿವಕುಮಾರ್ ಆದ ನಾನು ಕನ್ನಡಿಗರ ಪರವಾಗಿ ಈ ಮೂಲಕ ಅಭಿನಂದಿಸುತ್ತೇನೆ.
ಉದಂತ ಶಿವಕುಮಾರ್
ಅಧ್ಯಕ್ಷರು
ರಾಜರಾಜೇಶ್ವರಿ ನಗರ ವಿಧಾನಸಭಾ
ಕ್ಷೇತ್ರ
ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments