ಪ್ರಾರ್ಥನೆ
ಸಾಗರವ, ತಾರೆಗಳ
ಸೂರ್ಯ ಚಂದಿರನ
ಭೂಮಿ ಆಕಾಶವ
ನಿಲ್ಲಿಸಿ ನಿತ್ಯ ಪೊರೆವ
ಮೂರುತಿಯೇ ಎನ್ನ
ಮನದ ಆಸೆಗಳ ಬೆಳಗಿಸಿ
ಹೋಗುವೆಯಾ...
ನದಿಗಳಲಿ, ಕಡಲ
ನೊರೆ ತೆರೆಗಳಲಿ
ಚಿಗುರು ಗೊಂಚಲಿನಲಿ
ಅರಳುವ ಹೂ ದಳದಲಿ
ಮೆರೆವ ಮೂರುತಿಯೇ ಎನ್ನ
ಮನದ ಚೇತನವ ಬೆಳಗಿಸಿ
ಹೋಗುವೆಯಾ...
ಮಗುವ ತೊದಲಿನಲಿ
ಹಕ್ಕಿಗಳ ಇಂಚರದಲಿ
ಗುಡುಗು ಸಿಡಿಲಿನಲ್ಲಿ
ಹುಲ್ಲೆ ಕಣ್ಣುಗಳಲ್ಲಿ
ನಲಿವ ಮೂರುತಿಯೇ
ಎನ್ನ ಮನಕೆ ಸುಖವಿರಿಸಿ
ಹೋಗುವೆಯಾ...
ಭೀಮ ಶೌರ್ಯದವನೆ
ಧೈರ್ಯ ದೈತ್ಯದವನೆ
ಶಿಖರವನ್ನೆತ್ತಿದವನೆ
ದುಷ್ಟರನಳಿಸಿದವನೆ
ಎನ್ನ ಮನದ ಮೂರುತಿಯೇ
ಕಷ್ಟಗಳ ಕರಗಿಸಿ ಹೋಗುವೆಯಾ...
ಉದಂತ ಶಿವಕುಮಾರ್
ಕವಿ ಮತ್ತು ಲೇಖಕ
ಬೆಂಗಳೂರು -೫೬೦೦೫೬
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments