* ಸಾಹಿತ್ಯ ಕ್ಷೇತ್ರದವರೇ ಸಮ್ಮೇಳನ ಅಧ್ಯಕ್ಷರಾಗಲಿ; ಉದಂತ ಶಿವಕುಮಾರ್*.

 ಸಾಹಿತ್ಯ ಕ್ಷೇತ್ರದವರೇ ಸಮ್ಮೇಳನ ಅಧ್ಯಕ್ಷರಾಗಲಿ; ಉದಂತ ಶಿವಕುಮಾರ್.



ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿರುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ಇಲ್ಲಿ ನಾವು ಯೋಚಿಸಬೇಕಾದದ್ದು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ದುಡಿದ ಸಾಧಕರನ್ನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಸಮ್ಮೇಳನಗಳನ್ನು ನಡೆಸಬೇಕಾಗುತ್ತದೆ. ಭಾಷೆ ಇಲ್ಲಿ ಪ್ರಮುಖವಾಗಿ ಬೆಳೆಸುವ ನಿಟ್ಟಿನಲ್ಲಿ ಇದು ಅವಶ್ಯಕವಾಗಿದೆ. ಹಾಗಾಗಿ ಎಲ್ಲಾ ಕ್ಷೇತ್ರಗಳಲ್ಲಿ ಇರುವ ಸಾಧಕರನ್ನು ಸನ್ಮಾನಿಸುವ ಪರಿಪಾಠ ಸಮ್ಮೇಳನದಲ್ಲಿ ಇರಲಿ. ಆದರೆ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಸೇವೆ ಮಾಡಿರುವವರನ್ನು ಮಾತ್ರ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಲಿ ಅನ್ನೋದು ನನ್ನ ಅಭಿಪ್ರಾಯ. ಇದು ಸೂಕ್ತವೂ ಕೂಡ.


ಉದಂತ ಶಿವಕುಮಾರ್

ಕವಿ ಮತ್ತು ಲೇಖಕ 

ಬೆಂಗಳೂರು -560056

Image Description

Post a Comment

0 Comments