ಬೇವೂರು ಕಾಲೇಜಿಗೆ ಉತ್ತಮ ಫಲಿತಾಂಶ
ಬೇವೂರ : ಆದರ್ಶ ವಿದ್ಯಾವರ್ಧಕ ಸಂಘದ ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯದ ಬಿ.ಎ ಆರನೇ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕಾಲೇಜಿನ ಫಲಿತಾಂಶ ಸರಾಸರಿ ೯೪.೫೯% ಆಗಿದೆ. ೭೪ ವಿದ್ಯಾರ್ಥಿಗಳಲ್ಲಿ ೩೨ ವಿದ್ಯಾರ್ಥಿಗಳು ಶ್ರೇಷ್ಠ ದರ್ಜೆ (ಡಿಸ್ಟಿಂಕ್ಷನ್), ೧೬ ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ, ೨೧ ವಿದ್ಯಾರ್ಥಿಗಳು ದ್ವಿತೀಯ ಸ್ಥಾನದಲ್ಲಿ, ೧ ವಿದ್ಯಾರ್ಥಿ ತೃತೀಯ ಸ್ಥಾನದಲ್ಲಿ ಕಲಾ ವಿಭಾಗದ ಪರೀಕ್ಷೆಯಲ್ಲಿ ಉತೀರ್ಣರಾಗಿರುತ್ತಾರೆ. ಒಟ್ಟು ೬೫೦ ಅಂಕಗಳಿಗೆ, ೯೪.೧೫ % ( ೬೧೨) ಅಂಕಗಳನ್ನು ಪಡೆದು ಕುಮಾರಿ. ಪ್ರತಿಭಾ ಅಶೋಕ ಹೆಳವರ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕುಮಾರಿ ಸಂಗನಬಸವ್ವ ಚಂದಪ್ಪ ಕರಿಗಾರ ೯೩.೦೭% ( ೬೦೫) ಅಂಕಗಳನ್ನು ಪಡೆದು ದ್ವಿತೀಯ ಸ್ಥಾನವನ್ನು, ಕುಮಾರಿ ಭಾಗ್ಯಶ್ರೀ ಅಪ್ಪಣ್ಣ ಗೌಡರ ೮೮.೭೬% (೫೭೭) ಅಂಕಗಳನ್ನು ಪಡೆದು ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಉತ್ತಮ ಫಲಿತಾಂಶಕ್ಕೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಿ. ಜಿ. ಮಾಗನೂರ ವಕೀಲರು ಹಾಗೂ ಸದಸ್ಯರು ಸೇರಿದಂತೆ ಕಾಲೇಜಿನ ಪ್ರಾಚಾರ್ಯರಾದ ಡಾ. ಜಗದೀಶ ಗು. ಭೈರಮಟ್ಟಿ ಹಾಗೂ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿವರ್ಗ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವರದಿ : ಅಮರೇಶ. ಗೊರಚಿಕನವರ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments