ಸಾಹಿತಿ ಡಾ. ಶಿವಕುಮಾರ. ಲಾ. ಸೂರ್ಯವಂಶಗೆ ರಾಜ್ಯ ಮಟ್ಟದ "ಭೀಮ ರತ್ನ" ಪ್ರಶಸ್ತಿ.

 ಸಾಹಿತಿ ಡಾ. ಶಿವಕುಮಾರ. ಲಾ. ಸೂರ್ಯವಂಶಗೆ ರಾಜ್ಯ ಮಟ್ಟದ "ಭೀಮ ರತ್ನ" ಪ್ರಶಸ್ತಿ.


          

ದಿನಾಂಕ:೨೭.೧೦.೨೦೨೪ ರಂದು ಹುಮನಾಬಾದ ನಗರದ ಕೈಗಾರಿಕಾ ಪ್ರದೇಶದ ಹೊರ ವಲಯದಲ್ಲಿ ಶ್ರೀ, ಪರಮೇಶ್ವರಪ್ಪ ರೂಗನ್, ಗಡವಂತಿ, ಹುಮನಾಬಾದ್ ಇವರ ಸಾರಥ್ಯದಲ್ಲಿ  ಕಲಬುರಗಿಯ "ಭೀಮ ಪ್ರಕಾಶನ" ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮ ಜರುಗಿಸಲಾಯಿತು.


ಇದೇ ಸಂದರ್ಭದಲ್ಲಿ ಸಮಾಜದಲ್ಲಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರ್ತಿಸಿ ಸನ್ಮಾನಿಸಲಾಯಿತು. ಸಾಹಿತಿ ಡಾ. ಶಿವಕುಮಾರ. ಲಾ. ಸೂರ್ಯವಂಶ, ಕಲಬುರಗಿ, ಇವರ ಕನ್ನಡ, ನಾಡು, ನುಡಿಯ, ಕನ್ನಡಾಭಿಮಾನದ ಹಾಗೂ ಸುದೀರ್ಘವಾದ ಸಾಹಿತ್ಯ ಕ್ಷೇತ್ರದಲ್ಲಿನ  ಸಾಹಿತ್ಯ ಸೇವೆಯ ಸಾಧನೆಯನ್ನು ಗುರ್ತಿಸಿ, ಭೀಮ ಪ್ರಕಾಶನ ಸಂಸ್ಥೆ, ಕಲಬುರಗಿ (ನೋಂ) ಉದ್ಘಾಟನೆ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ರಾಜ್ಯಮಟ್ಟದ "ಭೀಮ ರತ್ನ" ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಡಾ. ಭದಂತ.ಎ. ಧಮ್ಮಾನಂದ, ಪೂಜ್ಯ ಡಾ. ಭಂತೆ ಜ್ಞಾನಸಾಗರ ಥೇರೊ, ಪೂಜ್ಯ ಭಂತೆ ವರಜ್ಯೋತಿ, ಪೂಜ್ಯ ಭಂತೆ ರೇವತ, ಪೂಜ್ಯ ಭಂತೆ ಧರ್ಮಪಾಲ, ಪೂಜ್ಯ ಭಂತೆ ಸಂಘಾನಂದ, ಪೂಜ್ಯ ಶ್ರೀ, ಡಾ. ಮ.ಘ.ಚ. ಬಸವಲಿಂಗ ಪಟ್ಟದೇವರು, ಹಿರೇಮಠ ಸಂಸ್ಥಾನ, ಭಾಲ್ಕಿ, ಪೂಜ್ಯ ಡಾ. ಸಿದ್ದರಾಮ ಬೆಲ್ದಾಳ ಶರಣರು, ಔರಾದ್, ಪೂಜ್ಯ ಡಾ. ಪಂಚಾಕ್ಷರಿ ಶರಣರು, ಉರಿಲಿಂಗ ಪೆದ್ದಿಮಠ, ಬೇಲೂರು ಮುಂತಾದ ವಹಿಸಿದರು. 


ಶ್ರೀ, ಶಾಲಿವಾಹನ ರೂಗನ್, ಹುಮನಾಬಾದ, ಡಾ. ಜಯದೇವಿ ಗಾಯಕವಾಡ್, ಕಲಬುರಗಿ, ಡಾ. ಸಂಧ್ಯಾ ಕಾನೇಕರ್ ಮುಂತಾದವರು ಕಾರ್ಯಕ್ರಮದ ಅತಿಥಿ ಸ್ಥಾನ ವಹಿಸಿದರು.


ಇದೇ ಸಂದರ್ಭದಲ್ಲಿ ಪೂಜ್ಯ ಡಾ. ಸಿದ್ದರಾಮ ಬೆಲ್ದಾಳ ಶರಣರು  ಮಾತನಾಡುತ್ತಾ, ಸಾಧಕರು ತಮ್ಮ ಒತ್ತಡದ ಕರ್ತವ್ಯಗಳ ಜೊತೆ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಇನ್ನೂ ಉನ್ನತ ಮಟ್ಟಕ್ಕೆ ಬೆಳೆಯಲೆಂದು ಮತ್ತು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಸಾಧಕರಿಗೆ ಹಾರೈಸಿದರು.


ವರದಿ : ಡಾ. ವಿಲಾಸ ಕಾಂಬಳೆ 

ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments