* ಬೇಂದ್ರೆಯವರ ಸಾಹಿತ್ಯ : ಜೇನು ತುಪ್ಪ ಸವಿದಂತೆ :ಪ್ರಾ : ಟಿ ಎಸ್ ವಂಟಗೂಡಿ *

 * ಬೇಂದ್ರೆಯವರ ಸಾಹಿತ್ಯ : ಜೇನು ತುಪ್ಪ ಸವಿದಂತೆ :ಪ್ರಾ : ಟಿ ಎಸ್ ವಂಟಗೂಡಿ *



ಹಿಡಕಲ್ ಗ್ರಾಮದ ಶ್ರೀ ಜಡಿ ಸಿದ್ದೇಶ್ವರ ನಿಲಯದ ಆವರಣದಲ್ಲಿ ವರಕವಿ ಶಬ್ದ ಗಾರುಡಿಗ ಡಾ ದ ರಾ ಬೇಂದ್ರೆಯವರ ಪುಣ್ಯ ಸ್ಮರಣೋತ್ಸವ ಸಮಾರಂಭ ಜರುಗಿತು ಸಮಾರಂಭದ ಮುಖ್ಯ ಅತಿಥಿಗಳಾಗಿ ಹಿಡಕಲ್ ವಸಂತ್ ರಾವ ಪಾಟೀಲ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಸಾಹಿತಿ ಟಿ ಎಸ್ ಒಂಟಗೂಡಿ ಮಾತನಾಡಿ ಕನ್ನಡ ಸಾರಸ್ವತ ಲೋಕಕ್ಕೆ ಹಲವಾರು ಕವನ ಸಂಕಲನಗಳನ್ನು,ಶ್ರೇಷ್ಠ ಸಾಹಿತ್ಯ ಕೃತಿಗಳನ್ನು,ಕಾವ್ಯ ಖಜಾನೆಗೆ ಸಮರ್ಪಿಸುವುದರೊಂದಿಗೆ ನಾಕುತಂತಿ ಕೃತಿಗೆ ಎರಡನೇ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಮಾತಿನ ಮೋಡಿಗಾರ,ನುಡಿ ಜಾದುಗಾರ ಕಾವ್ಯ ಮಾಂತ್ರಿಕ,ಡಾ ದ ರಾ ಬೇಂದ್ರೆಯವರ ಸಾಹಿತ್ಯ ಸೇವೆ ಶ್ಲಾಘನೀಯ ಬೇಂದ್ರೆಯವರು ಬೆಂದು ಬೇಂದ್ರೆಯಾದರು, ಆದರೆ ಬೇಂದ್ರೆಯವರ ಸಾಹಿತ್ಯ ಶ್ರೀಮಂತವಾದುದು ಬೇಂದ್ರೆಯವರ ಉಪನ್ಯಾಸಗಳನ್ನು ಕೇಳಲು ವಿದ್ಯಾರ್ಥಿಗಳಷ್ಟೇ ಅಲ್ಲದೆ ಶಿಕ್ಷಕರು ಕೂಡ ಅವರ ಮಾತುಗಳನ್ನು ಕೇಳಲು ಆಗಮಿಸುತ್ತಿದ್ದರು. 10ನೇ ಶತಮಾನದ ಪಂಪನ ಕಾವ್ಯ ಕಬ್ಬು ಸವಿದಂತೆ ಕುಮಾರವ್ಯಾಸನ ಕಾವ್ಯ ಸುಲಿದ ಬಾಳೆಹಣ್ಣಿನಂತೆ ಬಸವಣ್ಣನವರ ವಚನಗಳು ದ್ರಾಕ್ಷಿ ಹಣ್ಣು ಸವಿದಂತೆ ಆದರೆ ಡಾ ದ ರಾ ಬೇಂದ್ರೆಯವರ ಸಾಹಿತ್ಯ ಸವಿಯಾದ ಜೇನುತುಪ್ಪ ಸವಿದಂತೆ ಎಂದು ಪ್ರಾಚಾರ್ಯ ಸಾಹಿತಿ ಟಿ ಎಸ್ ವಂಟಗೂಡಿ ಅಭಿಮತ ವ್ಯಕ್ತಪಡಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ರಾಮು ವಂಟಗೂಡಿ ವಹಿಸಿಕೊಂಡಿದ್ದರು.ವೇದಿಕೆಯ ಮೇಲೆ ಲಕ್ಷ್ಮಿ ಪೂಜಾರಿ,ರೂಪಾ ಪೂಜಾರಿ ಮೀನಾಕ್ಷಿ ವಂಟಗೂಡಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. 


ವರದಿ : ಡಾ. ವಿಲಾಸ ಕಾಂಬಳೆ 

ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments