*ಗಜ಼ಲ್*

 *ಗಜ಼ಲ್*



ಬೆಳ್ಳಿ ಚಂದ್ರನಿಗೊಂದು ಚುಕ್ಕಿ ಬೇಕೆ

ಅಂದಗಾತಿಗೊಂದು ಚಂದನ ಬೇಕೆ


ಬಾಗಿ ನಿಂತರೇನಂತೆ ಬಳುಕುವ ಮೈ

ಚಂದಗಾತಿಗೊಂದು ಗುಳಿಕೆನ್ನೆ ಬೇಕೆ


ಗಲ್ಲದ ಮೇಲಿನ ಕೈ ಗೆಲ್ಲುತೈತಿ ಮನ

ವರದಿಗಾತಿಗೊಂದು ವನಪೂ ಬೇಕೆ


ಹಳ್ದಿ ರವಕೆ ಕೆಂಪು ಲಂಗದ ಕನ್ನಡತಿ

ಎದೆಗಾತಿಗೊಂದು ಎಳೆಗನಸು ಬೇಕೆ


ಶಶಿರವಿಯ ತನ್ಮಧ್ಯ ನುಡಿ ಮೃದಂಗ

ಮಾತುಗಾತಿಗೊಂದು ಮೌನ ಬೇಕೆ


*ರೇಖಾ ವಿ ಕಂಪ್ಲಿ* ✍️

Image Description

Post a Comment

0 Comments