* ಸದಸ್ಯತ್ವ ಪಡೆದು ದಸಾಪ ಬಲಪಡಿಸಿ : ಡಾ ಬಸವರಾಜ ಸಾಲವಾಡಗಿ *

 ಸದಸ್ಯತ್ವ ಪಡೆದು ದಸಾಪ ಬಲಪಡಿಸಿ : ಡಾ ಬಸವರಾಜ ಸಾಲವಾಡಗಿ



ದಲಿತ ಸಾಹಿತ್ಯ, ಕಲೆ, ಕ್ರೀಡೆ, ಸಂಗೀತ ಹಾಗೂ  ಪ್ರತಿಭಾನ್ವಿತರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕಾಗಿದೆ. ಹಾಗೆ ಆಸಕ್ತರು ದಲಿತ ಸಾಹಿತ್ಯ ಪರಿಷತ್ ಸದಸ್ಯತ್ವವನ್ನು ಪಡೆದುಕೊಂಡು ಜಿಲ್ಲಾ ಘಟಕವನ್ನು ಬಲಪಡಿಸಬೇಕು ಎಂದು ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷರಾದ ಡಾ. ಬಸವರಾಜ ಸಾಲವಾಡಗಿ ಮನವಿ ಮಾಡಿದರು.


ಗಗನ್ ಮಹಲ್ ಗಾರ್ಡನ್ನಲ್ಲಿ ದಲಿತ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಆಯೋಜಿಸಿದ ಪೂರ್ವಭಾವಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು ದಲಿತ ಸಾಹಿತ್ಯ ಕಲೆ ಸಂಸ್ಕೃತಿ ವಿಚಾರ ಸಂಕೀರ್ಣ ಹಾಗೂ ದತ್ತಿ ಉಪನ್ಯಾಸಗಳು ಜರುಗುವಂತೆ  ಎಲ್ಲಾ ಕಾರ್ಯಕಾರಿಣಿ ಸಮಿತಿಯವರು ಹಾಗೂ ತಾಲೂಕು ಅಧ್ಯಕ್ಷರುಗಳು ಮಾಡಬೇಕಾಗಿದೆ ಎಂದು ಹೇಳಿದರು.


ಬೆಳಗಾವಿ ದಸಾಪ ವಿಭಾಗದ ಸಂಯೋಜಕರಾದ ಡಾ ಸುಜಾತ ಚಲವಾದಿ ಮಾತನಾಡಿ ಜಿಲ್ಲಾ ಘಟಕವನ್ನು ಬಲಪಡಿಸುವ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಸದಸ್ಯರನ್ನು ನೋಂದಾಯಿಸುವ ಕಾರ್ಯವಾಗಬೇಕಾಗಿದೆ ದಲಿತ ಪ್ರತಿಭೆಗಳಿಗೆ ಉತ್ತಮ ಪರಿಸರ ನಿರ್ಮಿಸಿ ಕೊಡುವುದರ ಮೂಲಕ ಈ ಭಾಗದ ಕಾರ್ಯಚಟುವಟಿಕೆಗಳು ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ ಎಂದು ಹೇಳಿದರು.


ಪ್ರೊ ಚಂದ್ರಶೇಖರ ಹಂಗರಗಿ ಸ್ವಾಗತಿಸಿದರು. ಡಾ ಎಂ ಎಸ್ ಶಿವ ಶರಣರ ವಂದಿಸಿದರು. ಡಾ ಎಚ್ ಡಿ ನಡುವಿನ್ ಕೇರಿ ಶಿವಮೂರ್ತಿ ಚಿಕ್ಕನರ್ತಿ ಮಹಾನಂದ ಎಸ್ ಬಿರಾದಾರ್ ಶಶಿಕಲಾ ಜ ಬುಯಾರ್ ಧನಲಕ್ಷ್ಮಿ ದೊಡ್ಡಮನಿ ಚಂದ್ರಕಾಂತ ಎನ್ ಕುನ್ನೂರ ಮಹಾದೇವಯ್ಯ ಕಲ್ಮಠ ಡಾ ಸರೀತಾ ಹಿಪ್ಪರಗಿ ಡಿ ಎಸ್ ರಾಂಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು. 


ವರದಿ : ಡಾ. ವಿಲಾಸ ಕಾಂಬಳೆ 

ಕನ್ನಡ ಉಪನ್ಯಾಸಕರು 

ಬೆಳಗಾವಿ

Image Description

Post a Comment

0 Comments