*ಮಧ್ಯಪಾನದ ವಿರುದ್ಧ ಜನಾಂದೋಲನದ ಅಗತ್ಯವಿದೆ:* *ಪ್ರೊ ಶ್ರೀಕಾಂತಗೌಡ ಪಾಟೀಲ*

 .*ಮಧ್ಯಪಾನದ ವಿರುದ್ಧ ಜನಾಂದೋಲನದ ಅಗತ್ಯವಿದೆ:*

*ಪ್ರೊ ಶ್ರೀಕಾಂತಗೌಡ ಪಾಟೀಲ*



ರಾಯಬಾಗ:ನಮ್ಮ ರಾಷ್ಟ್ರದ ಸಂಪತ್ತು ಎನಿಸಿರುವ ವರ್ತಮಾನದ ಯುವಕರು ಮಧ್ಯಪಾನಕ್ಕೆ ದಾಸರಾಗಿ ತಮ್ಮ ಉಜ್ವಲ ಭವಿಷ್ಯ ಕಳೆದುಕೊಳ್ಳುತ್ತಿರುವುದರ ಬಗ್ಗೆ ತೀವ್ರ ಕಳವಳಕಾರಿದೆ. ಇದರ ಬಗ್ಗೆ ವ್ಯಾಪಕ ಜನಾಂದೋಲನ ಅಗತ್ಯವಿದೆ ಎಂದು ತಾಲ್ಲೂಕಿನ ಖನದಾಳ ಗ್ರಾಮದ ಶರಣಜೀವಿ, ಕನ್ನಡ ಪ್ರಾಧ್ಯಾಪಕರು, ಆಮ್ ಆದ್ಮಿ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಪ್ರೊ ಶ್ರೀಕಾಂತಗೌಡ ಮು. ಪಾಟೀಲ ತಮ್ಮ ಅಂತರಂಗದ ಅಭಿಮತ ವ್ಯಕ್ತಪಡಿಸಿದರು.

ಭಾನುವಾರ ಖನದಾಳದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ತಾವು ಹೋದಲೆಲ್ಲಾ ಖುದ್ದು ಯುವಕರಿಗೆ ಕರಮುಗಿದು ಶಿರಬಾಗಿ ದುಷ್ಟ ಚಟ ಬಿಟ್ಟು ಗೌರವಯುತವಾಗಿ ಬದುಕಿ ಬಾಳಿರಿ. ನಿಮ್ಮನ್ನೇ ನಂಬಿಕೊಂಡ ತಂದೆ ತಾಯಿಗಳಿಗೆ ಎಂದಿಗೂ ಮೋಸ ಮಾಡದಿರಿ.ಗುಟ್ಕಾ ತಂಬಾಕು ಸೇವನೆಯಿಂದ ನಿಮ್ಮ ಆರೋಗ್ಯ ಕೆಡುವುದಲ್ಲದೇ ನಿಮ್ಮ ಕುಟುಂಬದ ನೆಮ್ಮದಿಯೂ ಸಹ ಹಾಳಾಗುತ್ತದೆ ಎಂದು ಪ್ರಾಮಾಣಿಕವಾಗಿ ಅವರಿಗೆ ಮನವರಿಕೆ  ಮಾಡಿಕೊಡುವ ಭಗೀರಥ ಪ್ರಯತ್ನ ನಿತ್ಯ ನಿರಂತರ ಮಾಡುತ್ತಿರುವುದಾಗಿ ತಮ್ಮ ಹೋರಾಟದ  ಸ್ವಾನುಭವವನ್ನು ಚೆನ್ನಾಗಿಯೇ ಹಂಚಿಕೊಂಡರು. ಯುವಕರು ಹಾಳಾದರೆ ಈ ದೇಶ ಹಾಳಾದಂತೆಯೇ.ಯುವಕರು ಈಗ ದಾರಿ ತಪ್ಪಿ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳಲು ಮುಖ್ಯವಾಗಿ  ಮನೆಯಲ್ಲಿನ ಸಂಸ್ಕಾರದ ತೀವ್ರ ಕೊರತೆಯಿಂದ ದುಶ್ಚಟಗಳ ದಾಸರಾಗಿದ್ದು ಅತ್ಯಂತ ಖೇದಕರ ಎಂದರು.ಕಳೆದ ಒಂದು ತಿಂಗಳಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿ ಮಧ್ಯಪಾನದ ವಿರುದ್ಧ ಜನಜಾಗೃತಿಯ ಸರಣಿ ಸಂದೇಶಗಳ ಮೂಲಕ ಸಮರ ಸಾರಿರುವ ಪ್ರೊ ಶ್ರೀಕಾಂತಗೌಡ ಪಾಟೀಲ ಅವರ ಈ ವಿಶಿಷ್ಟ ಕಾರ್ಯಕ್ಕೆ ತಾಲ್ಲೂಕಿನ ಹಲವು ಸ್ತ್ರೀ ಶಕ್ತಿ ಸಂಘಟನೆಗಳು ನೈತಿಕ ಬೆಂಬಲ ವ್ಯಕ್ತಪಡಿಸಿರುವುದು ಇವರ ಸಾಮಾಜಿಕ ಕಾರ್ಯಕ್ಕೆ ಇದೀಗ ಆನೆಬಲ ಬಂದಂತಾಗಿದೆ. ಹಳ್ಳಿ ಹಳ್ಳಿಗಳಲ್ಲಿ ಯುವಕರು ವಿಪರೀತ ಕುಡಿತಕ್ಕೆ ಒಳಗಾಗಿರುವ ಪರಿಣಾಮ  ಹೆಚ್ಚು ಅಪಘಾತಗಳು ಸಂಭವಿಸುತ್ತಿರುವುದು ಸಾರ್ವತ್ರಿಕ ಸತ್ಯ. ಇದರಿಂದ ಇವರ ಮೇಲೆ ಅಪಾರ ನಿರೀಕ್ಷೆ ಇರಿಸಿದ ಹೆತ್ತ ತಂದೆ ತಾಯಿಯರು ಜೀವನ ಪರ್ಯಂತ ಕಣ್ಣೀರಿನಲ್ಲಿಯೇ ಕೈ ತೊಳೆದುಕೊಳ್ಳಬೇಕಾದ ದುಃಸ್ಥಿತಿ ಬಂದೊದಗಿದೆ ಎಂದು ವಿಶ್ಲೇಷಿಸಿದರು. ಬಸವಾದಿ ಶಿವಶರಣರ, ಮಹಾತ್ಮಾ ಗಾಂಧೀಜಿ, ಹಾಗೂ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜೀವನ  ತತ್ವ ಸಂದೇಶಗಳಿಗೆ ತೀವ್ರ ಪ್ರಭಾವಿತರಾಗಿ ಹದಗೆಟ್ಟು ಹೋದ ಈ ನಾಗರಿಕ ಸಮಾಜಕ್ಕೆ ರೋಷಿ ಹೋಗಿರುವ ತಾವು ಆರೋಗ್ಯಕರ ಸಮಾಜ ನಿರ್ಮಾಣ ಮಾಡುವುದೇ ನನ್ನ ಈ ಹೋರಾಟದ ಪ್ರಮುಖ ಮಹೋನ್ನತ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರು. ಗ್ರಾಮಗಳು ಸಂಪೂರ್ಣ ಮಧ್ಯಮುಕ್ತವಾಗಬೇಕಾದರೆ "ಹನಿ ಹನಿ ಕೂಡಿದರೆ ಹಳ್ಳ, ತೆನೆ ತೆನೆ ಕೂಡಿದರೆ ಬಳ್ಳ" ಎಂಬ ಗಾದೆಯಂತೆ ತಾಲ್ಲೂಕಿನ ಪ್ರತಿಯೊಂದು ಗ್ರಾಮದ ಪ್ರಗತಿಪರ ಚಿಂತನಶೀಲ ಯುವಕರು ಎಚ್ಚೆತ್ತುಕೊಂಡು  ನನ್ನ ಈ ಪಕ್ಷಾತೀತ ಧರ್ಮಾತೀತ, ಜಾತ್ಯತೀತ ಹೋರಾಟಕ್ಕೆ ಅಮೂಲ್ಯ ಸಹಕಾರ ಯಾಚಿಸುತ್ತ ಗುರು ಹಿರಿಯರಿಂದ ಹಂಬಲದ ಬೆಂಬಲ, ದಿವ್ಯ ಶುಭಾಶೀರ್ವಾದ ಸಿಕ್ಕೇ ಸಿಗುತ್ತದೆ ಎಂದು ಪ್ರೊ ಶ್ರೀಕಾಂತಗೌಡ ಪಾಟೀಲ  ವಿಶ್ವಾಸ ವ್ಯಕ್ತಪಡಿಸಿದರು.


*ವರದಿ:ಡಾ. ಜಯವೀರ ಎ.ಕೆ.*

     *ಖೇಮಲಾಪುರ*

Image Description

Post a Comment

0 Comments