🙏🙏 *ಓಂ ಶ್ರೀ ಶಾರದಾ ಗುರುಭ್ಯೋ ನಮಃ* 🙏🙏
ಶೀರ್ಷಿಕೆ : *ಪ್ರೇಮ ಸಾಗರದಲ್ಲಿ*
ಪ್ರೇಮ ಸಾಗರದಲ್ಲಿ ಮುಳುಗುವುದೇ
ತೇಲಲು ಅದು ಬಿಡುವುದೇ
ತನ್ನ ಸುಳಿಯಲ್ಲಿ ಚಕ್ರದಂತೆ ಸೆಳೆವುದೇ
ಬೇಡೆಂದರೂ ಆ ಮಾತು ರುಚಿಸುವುದೇ
ಸಾಗರದಿ ಅಲೆಗಳು ನಿರಂತರ ಎದ್ದಂತೆ
ಹಿಂದೆಯೇ ದಡಕ್ಕೆ ಅಪ್ಪಳಿಸುವುದಂತೆ
ಪ್ರೇಮದ ಅಲೆ ಬೀಸಲು ತಮ್ಮೆಲರಂತೆ
ವಿರಹಕೆ ಜಾಗ ನೀಡದೆ ಸುಳಿವುದಂತೆ
ನಿನ್ನ ಪ್ರೇಮದಿ ಬಂಧಿಯಾಗಿರುವೆ
ನಿನ್ನ ಬಿಟ್ಟು ಕ್ಷಣ ಕಾಲ ಇರದಾಗಿರುವೆ
ನನ್ನ ಮನಸ್ಸಿನ ತುಂಬಾ ಆವರಿಸಿರುವೆ
ನೀನಿಲ್ಲದ ನನ್ನ ಬಾಳು ಶೂನ್ಯವಾಗಿದೆ
ಮನ ಮೆಚ್ಚಿದ ಒಡತಿಯಾಗಿರುವೆ
ಬೇರೆ ಹೆಣ್ಣನ್ನು ಕನಸಲ್ಲೂ ನೋಡೇನೆ
ಏಳೇಳು ಜನ್ಮಕ್ಕೂ ಸಂಗಾತಿ ಎಂದಿದೆ
ಮದುವೆಯಾಗಿ ಮನೆ ಬೆಳಗುತ್ತಿರುವೆ
✍️ *ಮಳೆಬಿಲ್ಲು ಡಾ. ಲೀಲಾ ಗುರುರಾಜ್* ತುಮಕೂರು.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments