ಶೀರ್ಷಿಕೆ: *ವೀಣಾ ವಾದಕಿಯು*
ವೀಣಾ ವಾದಕಿಯು
ಅದ ನುಡಿಸುವ ದೇವತೆಯು
ಭಾವನೆಗಳು ಹೊಮ್ಮಿದೆಯು
ನಾದ ತರಂಗವಾಗಿದೆಯು
ತನ್ನ ಸಂಗಾತಿಯಂತೆ
ಅಪ್ಪಿ ಮುದ್ದಾಡುವಂತೆ
ಇಂಪಾದ ಗಾನ ಕೇಳುವಂತೆ
ತನುವೆಲ್ಲಾ ತೂಗಿದೆಯಂತೆ
ಮನಸೆಲ್ಲ ಮೀಟಿ ಝೆoಕರಿಸಿದೆ
ತಂತಿನಾದವು ಹೊರಹೊಮ್ಮಿದೆ
ಬೆರಳ ಮೃದು ಸ್ಪರ್ಶಕೆ ಕಾಯುತಿದೆ
ತನ್ನೊಡತಿಯ ಆಣತಿಯ ಬೇಡುತಿದೆ
ವೀಣಾ ಪಾಣಿಯಂತೆ ಶೋಭಿಸುತ್ತಿರವೆ
ಮಧುರ ಗಾನಕೆ ಮನ ಸೋಲುತಿರುವೆ
ಹೆಣ್ಣೊಡಲಿನ ಬಾಳಿಗೆ ಗೆಳತಿ ಯಾಗಿರುವೆ
ಅಲೆಯೊಂದಿಗೆ ನಾದ ತರಂಗ ವಾಗಿರುವೆ
✍️ *ಮಳೆಬಿಲ್ಲು ಡಾ. ಲೀಲಾ ಗುರುರಾಜ್* ತುಮಕೂರು.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments