* ಸ್ವರಾಕ್ಷರ ಕವನ*

 *ಸ್ವರಾಕ್ಷರ ಕವನ*



*ಗಂಧರ್ವ*


*ಅ*:ಅವನೆಂದರೆ ಗಂಧರ್ವ ಪ್ರಿಯಕರನು 

*ಆ*: ಆನಂದದ ಉತ್ಸಾಹದ ಒಲುಮೆಯವನು 

*ಇ*: ಇನಿಲ್ಲದಂತೆ ನನ್ನ ಮನವ ಕದ್ದ ಚಂದಿರನು 

*ಈ*: ಈರೆಳುಲೋಕದಲ್ಲಿಲ್ಲ ನನ್ನ ಮನದನ್ನನು 

*ಉ*:ಉಪಾಯ ಮಾಡಿ ನನ್ನನು ಸೆಳೆ ದೊಯ್ಯುವನು 

*ಊ*:ಊರಿಗೆ ಕರೆದೊಯ್ಯುವೆನೆಂದು ಬಾ ಎನ್ನುವನು 

*ಋ*:ಋಷಿಯಂತೆ ಬದುಕಿದವನು ಈಗ ಸಂಸಾರಿಯಾಗ ಬಯಸಿರುವನು 

*ಎ*:ಎಷ್ಟು ಸಾರಿ ಹೇಳಿದರೂ ಕೇಳದೆ  ಪದೇ ಪದೇ ಮನೆಯ ಬಳಿ ಸುಳಿವನು 

*ಏ*:ಏನೆಂದು ಹೇಳಲಿ ನನ್ನಲ್ಲೇ ಪ್ರಾಣ ಇಟ್ಟಿರುವನು 

*ಐ*:ಐoದ್ರ ಜಾಲದ ವಿದ್ಯೆ ಗೊತ್ತಿರುವಂತೆ ಮೋಡಿ ಮಾಡಿರುವನು 

*ಒ*:ಒಬ್ಬನೇ ಇರಲೊಲ್ಲದೆ ಜೊತೆ ಯಾಗಲು ಕಾದಿರುವನು 

*ಓ*:ಓ ನನ್ನ ನಲ್ಲನೇ ನೀನು ಆ ದೇವರು ನೀಡಿರುವ ವರನಂತೆ 

*ಔ*:ಔಪಚಾರಿಕವಾಗಿಯೂ ನಾನು ಅವನಿಗೆ ಸಹಕರಿಸಿರಲಿಲ್ಲ 

*ಅಂ*:ಅಂತ ಗೊತ್ತಿದ್ದರೂ ಬಿಡದೆ ಕಾಡುವನಲ್ಲ 

*ಆ:* ಆ:ನಂದ ಮೂಡುತಿದೆ ಮನದಲ್ಲಿ ಇವನಂತಹ  ಪ್ರೇಮಿಗಳಿಲ್ಲ ಜಗದಲ್ಲಿ.


✍️ *ಮಳೆಬಿಲ್ಲು ಡಾ. ಲೀಲಾ ಗುರುರಾಜ್* ತುಮಕೂರು.

Image Description

Post a Comment

0 Comments