* ಜ್ಞಾನದ ಬೆಳಕು ಹರಡಲಿ, ಮೌಢ್ಯ ಅಳಿಯಲಿ" ಉಪೇಂದ್ರ ಕುಮಾರ್ *

 "ಜ್ಞಾನದ ಬೆಳಕು ಹರಡಲಿ, ಮೌಢ್ಯ ಅಳಿಯಲಿ" ಉಪೇಂದ್ರ ಕುಮಾರ್ 



ವಿಶ್ವಚೇತನ ಬಳಗ ಮತ್ತು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ದಸರಾ ಹಾಗೂ ದೀಪಾವಳಿ ಸಂಭ್ರಮದ ಪ್ರಯುಕ್ತ ನಾಲ್ಕನೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಇದರ ಸರ್ವಾಧ್ಯಕ್ಷರಾಗಿ ಕನ್ನಡ ಪ್ರಾಧ್ಯಾಪಕರಾದ ಉಪೇಂದ್ರ ಕುಮಾರ್ ಎಂ .ಆರ್. ಭಾಗವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ನಿಕಟಪೂರ್ವ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಎಲ್ ಲೋಕೇಶ್ ಅವರು ನೆರವೇರಿಸಿದರು. ಪ್ರಾಧ್ಯಾಪಕರಾದ ಡಾ. ಚನ್ನವೀರಯ್ಯ ಅವರು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕನ್ನಡ ಚಳುವಳಿ ಹೋರಾಟಗಾರರಾದ ಶಂಕರ್ ಹೂಗಾರ್ ಪ್ರಶಸ್ತಿ ಪ್ರಧಾನ ಮಾಡಿದರು. ಮುಖ್ಯ ಅತಿಥಿಗಳಾಗಿ ನಾ ಶ್ರೀಧರ, ಡಾ. ಎಸ್. ಅಂಬುಜಾ ಪ್ರಕಾಶ್, ಚೆನ್ನಗಿರಿ ತಿರುಮಲರಾವ್, ಡಾ. ಎಂ. ಶಿವಸ್ವಾಮಿ ಉಪಸ್ಥಿತರಿದ್ದರು. 


ಈ ಸಂದರ್ಭದಲ್ಲಿ ಸಾಧಕರಾದ ಆಯುಷ್ಮತಿ ಚೂಡಾಮಣಿಯವರಿಗೆ "ನವಚೈತನ್ಯ ಶ್ರೀ" ಪ್ರಶಸ್ತಿಯನ್ನು ಮತ್ತು ಆಯುಷ್ಮತಿ ಜೆ ಪುಟ್ಟಮಣ್ಣಿ ಅವರಿಗೆ "ವಿಶ್ವಚೇತನ ಶ್ರೀ" ಪ್ರಶಸ್ತಿಯನ್ನು ನೀಡಲಾಯಿತು. ಇದಲ್ಲದೆ ಸಾಧಕರಿಗೆ "ಮೈಸೂರು ದಸರಾ" ಪ್ರಶಸ್ತಿಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಭರತನಾಟ್ಯ, ರಂಗಗೀತೆ, ಸುಮಧುರ ಗಾನ, ಏಕಪಾತ್ರ ಅಭಿನಯಗಳನ್ನು ನಡೆಸಿಕೊಡಲಾಯಿತು. ಹಲವು ತಂಡಗಳಿಂದ ಭಜನೆಗಳನ್ನು ನಡೆಸಲಾಯಿತು. 



ಮಧ್ಯಾಹ್ನ ವಿಚಾರಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು ವಿಚಾರಗೋಷ್ಠಿ ಅಧ್ಯಕ್ಷತೆಯನ್ನು ಪ್ರಾಧ್ಯಾಪಕ ಡಾ. ಆರ್ ವಾದಿರಾಜರವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಯಾಗಿ ಡಾ. ಕವಿತಾ ಭಾಗವಹಿಸಿದ್ದರು. ಕೆ.ಬಿ. ಮಹದೇವಪ್ಪ ಅವರು "ಜ್ಞಾನದಿಂದ ವಿಜ್ಞಾನ ದೇವಟಿಗೆ" ವಿಚಾರವನ್ನು ಕುರಿತು ಉಪನ್ಯಾಸ ನೀಡಿದರು. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಕಾಸಾಪ ಅಧ್ಯಕ್ಷ ಹಾಗೂ ಕವಿ ಉದಂತ ಶಿವಕುಮಾರ್ "ರಣಧೀರ ಕಂಠೀರವ ನರಸರಾಜ ಒಡೆಯರ್" ರವರ ಬಗ್ಗೆ ವಿಚಾರ ಮಂಡಿಸಿದರು. 


ನಂತರ ನಡೆದ ಕವಿಗೋಷ್ಠಿಯಲ್ಲಿ, ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಬಿ. ಶೃಂಗೇಶ್ವರ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ವಿ. ಟಿ. ರಾಮಕೃಷ್ಣಯ್ಯ ರಾಕಿ ಭಾಗವಹಿಸಿದ್ದರು. ಕವಿಗೋಷ್ಠಿಯಲ್ಲಿ ಗವೀಶಾ ಎಂ.ಸಾಲಿ ಮಠ, ವಿ. ಹೇಮಂತ್ ಕುಮಾರ್, ಯೂಸುಫ್, ಪ್ರಭಾಕರ್ ಗಂಗೊಳ್ಳಿ, ಟಿ.ಎನ್. ಚಂದ್ರಶೇಖರರಾವ್, ಎಂ. ಸಿ. ಬಸವರಾಜು, ಎಂ. ಅಶ್ವಿನಿ, ಶ್ರೀನಿಧಿ, ಮಹೇಶ್, ಸುಭಾಷ್ ಎಂ.  ಸಂದೇಶ್ ಕುಮಾರ್, ಪ್ರಸನ್ನ ಕುಮಾರ್ ಮುಂತಾದವರು ಭಾಗವಹಿಸಿ ಕವಿತ ವಾಚನ ಮಾಡಿದರು. ಮುಖ್ಯ ಶಿಕ್ಷಕರಾದ ಹೆಚ್. ಎನ್. ಪರಮೇಶಯ್ಯ ಹಾಗೂ ಭೌತಶಾಸ್ತ್ರ ಉಪನ್ಯಾಸಕರಾದ ಎಂ. ಬಿ .ಅಶ್ವತ್ ಲಕ್ಷ್ಮಿ ಅವರಿಗೆ ವಿಶೇಷ ಗೌರವ ಸನ್ಮಾನ ನೀಡಲಾಯಿತು. 


ಸಮಾರೋಪ ಸಮಾರಂಭದಲ್ಲಿ ಲೇಖಕ ಆರ್. ಸದಾಶಿವಯ್ಯ ಜರಗನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಹದೇವಪುರ ವಿಧಾನಸಭಾ ಕ್ಷೇತ್ರದ ಕಾಸಾಪ ಅಧ್ಯಕ್ಷರಾದ ವೀರಭದ್ರಪ್ಪ, ಡಾ. ಎಚ್ ಎನ್. ಉಪಾಧ್ಯಾಯ, ಪರಿಸರ ಪ್ರೇಮಿ ಚಂದ್ರಶೇಖರ ಆರ್. ಎಸ್.,  ಸಾಹಿತ್ಯ ಸಂಸ್ಕೃತಿ ವೇದಿಕೆ ಉಪಾಧ್ಯಕ್ಷರಾದ ಶಿವನಂಜಪ್ಪ ಉಪಸ್ಥಿತಿ ಇದ್ದರು. ಆಯೋಜಕರಾದ  ಡಾ. ಎಂ  ಶಿವಸ್ವಾಮಿ ಅವರು ಆಶಯ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಕುವರ ಎಲ್ಲಪ್ಪ, ಡಾ. ಗುಣವಂತ ಮಂಜು,  ಆರ್ ರಂಗಸ್ವಾಮಿ, ಈ. ಬಸವರಾಜು, ಡಾ. ಮಂಜು ಪಾಂಡವಪುರ, ಗೋವಿಂದಳ್ಳಿ ಕೃಷ್ಣೇಗೌಡ, ಮ. ಚಂದ್ರಶೇಖರ್,  ಬಿ. ನಾಗೇಶ್ ಭಾಗವಹಿಸಿದ್ದರು. ಸರ್ವಾಧ್ಯಕ್ಷರಾದ ಎಂ. ಆರ್. ಉಪೇಂದ್ರ ಕುಮಾರ್ ಅವರು ದೀಪಾವಳಿಯ ಬೆಳಕಿನಂತೆ ಜ್ಞಾನದ ಬೆಳಕು ಎಲ್ಲಾ ಕಡೆ ಹರಡಬೇಕು. ಮೌಢ್ಯವೆಂಬ ಕತ್ತಲನ್ನು ಕಳಿಯಬೇಕು ಜಾಗೃತರಾಗಿ ಬದುಕನ್ನು ಎಲ್ಲರೂ ಅನುಭವಿಸಬೇಕು ಎಂದು ಹೇಳಿದರು.



ಧನ್ಯವಾದಗಳು 

ಎಂ. ಶಿವಸ್ವಾಮಿ

Image Description

Post a Comment

0 Comments