ದಿನಾಂಕ : ೨೧/೧೦/೨೦೨೪
ಪ್ರಕಾರ : ಕವನ
*ಶೀರ್ಷಿಕೆ : ದೂರದ ಮನಸು*
ದುರಾಗುವ ಮುನ್ನ ಏನೂ ಅನಿಸದ ಮನಸು
ಇಬ್ಬರು ದೂರದ ಮೇಲೆ ಏಕೇ ಕೊರಗುತಿದೆ!
ತಿಳಿಯುತ್ತಿಲ್ಲ ಇದರ ಅರ್ಥ ಮರ್ಮದ ಒಳ ಮನಸು
ಕ್ಷಮಿಸಿ ಮರಳಿ ಒಮ್ಮೆಯಾದರು ಬಳಿ ಬರಬಾರದೆ!!
ಈ ಪ್ರೀತಿ ಸ್ನೇಹದ ಗುಟ್ಟು ತಿಳಿಯುತ್ತಿಲ್ಲ
ನಿಮ್ಮ ಸಂಬಂಧ ಬಿಡುವ ಮನಸು ನನಗಿಲ್ಲ!
ಕಣ್ಣಿನ ರೆಪ್ಪೆ ಜೋರಾಗಿ ಬಡಿಯುತಿದೆಯಲ್ಲ
ದೂರದ ಮನಸು ನೀ ಕೊರಗದಿರು ಕಣ್ಣೀರಲ್ಲಿರುವೆನಲ್ಲ!!
ನಿಮ್ಮನ್ನು ಸೇರುವ ಬಯಕೆಯಲಿ ಮನಸು ಕತೋರೆಯುತಿದೆ
ಕ್ಷಮೆ ಇಲ್ಲದ ಸ್ನೇಹ ನನ್ನದೆ ತಿಳಿಯುತ್ತಿಲ್ಲ ಸೇರಬಾರದೆ!
ಮನಸಿನ ಬಾನೆಗಳು ಈಗ ಕೊತ ಕೊತನೆ ಕುದಿಯುತಿದೆ
ದೂರ ವಿದ್ದರು ನಿನ್ನ ಹತ್ತಿರ ನಾನಿರುವೆ ಎಂದು ಹೇಳಬಾರದೆ!!
ನೀವು ಹೇಳುವ ಮಾತು ಕೇಳುವ ಮನಸು ಇಲ್ಲಿ ಕಾಯುತಿದೆ
ಕೊನೆ ಕ್ಷಣವಾದರು ಒಂದು ಬಾರಿ ಬಂದು ಹೋಗಬಾರದೆ!
ಕತ್ತಲಾಗಿದೆ ನಿಮ್ಮ ದಾರಿ ಕಾಯುತ್ತ ನಾನಿಲ್ಲೆ ಕುಳಿತಿರುವೆ
ತಪ್ಪು ಮನ್ನಿಸಿ ಈ ಸ್ನೇಹ ಪವಿತ್ರ ನಿಮ್ಮ ಕವನದ ಸಾಲಲ್ಲಿ ಸೇರುವೆ!!
📝 ಕಾವ್ಯ ಪ್ರಸಾದ್
ಚಿಕ್ಕಬಳ್ಳಾಪುರ ಜಿಲ್ಲೆ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments