* ಜ್ಞಾನ ವಿಶಾರದೆ ಸಮ್ಮಾನ್ ಗೌರವ ಪುರಸ್ಕಾರಕ್ಕೆ ಎಲೆಮರೆ ಕಾಯಿಗಳು ಪುಸ್ತಕ ಆಯ್ಕೆ....

 ಜ್ಞಾನ ವಿಶಾರದೆ ಸಮ್ಮಾನ್ ಗೌರವ ಪುರಸ್ಕಾರಕ್ಕೆ ಎಲೆಮರೆ ಕಾಯಿಗಳು ಪುಸ್ತಕ ಆಯ್ಕೆ....



ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ನಿವಾಸಿಯಾಗಿರುವ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿಯ ಶಿಕ್ಷಕರು ಆಗಿರುವ ಶ್ರೀ ಮುತ್ತು ಯ. ವಡ್ಡರ ಇವರ ನಾಡಿನ ಸುಮಾರು 50 ಜನ ಸಾಧಕರ ಪರಿಚಯ ಇರುವ ಎಲೆಮರೆ ಕಾಯಿಗಳು ಪುಸ್ತಕವು ಶ್ರೀ ಉತ್ಸವಾಂಬ ಪ್ರಕಾಶನ ಇಟ್ಟಿಗಿ ಇವರು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕೊಡ ಮಾಡುವ 2024ರ ಜ್ಞಾನ ವಿಶಾರದೆ ಸಮ್ಮಾನ್ ಪುಸ್ತಕ ಗೌರವ ಪುರಸ್ಕಾರಕ್ಕೆ ಆಯ್ಕೆಯಾಗಿದೆ ಎಂದು ಹಾಲಪ್ಪ ಚಿಗಟೇರಿ (ಹಾಚಿ ) ಅಧ್ಯಕ್ಷರು ಹಾಗೂ ಪ್ರಕಾಶಕರು ಶ್ರೀ ಉತ್ಸವಾಂಬ ಪ್ರಕಾಶನ ಇಟ್ಟಿಗಿ ಇವರು ತಿಳಿಸಿದ್ದಾರೆ.


 ಶ್ರೀ ಮುತ್ತು ವಡ್ಡರ ಇವರ ಕರ್ನಾಟಕದ ಹಲವಾರು ಜಿಲ್ಲೆಗಳ ಸುಮಾರು 50 ಜನ ಸಾಧಕರ ಪರಿಚಯ ಇರುವ ಈ ಪುಸ್ತಕವು ಇದೇ ವರ್ಷದ ಜೂನ್ ತಿಂಗಳಲ್ಲಿ ಮೈಸೂರಿನಲ್ಲಿ ಬಿಡುಗಡೆಯಾಗಿತ್ತು. ಪುಸ್ತಕ ಗೌರವ  ಪುರಸ್ಕಾರಕ್ಕೆ ಆಯ್ಕೆಯಾದ ಪ್ರಯುಕ್ತ ಎಲೆಮರೆ ಕಾಯಿಗಳು ಪುಸ್ತಕದಲ್ಲಿರುವ ಸರ್ವ ಸಾಧಕರು ಹರ್ಷ ವ್ಯಕ್ತಪಡಿಸಿದ್ದಾರೆ. 


ವರದಿ : ಡಾ. ವಿಲಾಸ ಕಾಂಬಳೆ 

ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments