ಒಂಟಿ ಜೀವನ
ಕಂಡೆ ನನ್ನ ಈ ಸ್ಥಿತಿ ಓ..ಮನುಜ...
ಬೆಡವಿನಿಸಿದೆ ನನ್ನ ಒಂಟಿ ಜೀವನ......
ನೀರ ಮೇಲೆ ಗುಳ್ಳೆಯಂತೆ ನನ್ನ ಜೀವನ
ಬಂಧು ಬಳಗವಿಲ್ಲದೆ ನನಗೆ ಆಯ್ತು ಈತರ
ತೊರೆಯ ಮೆರೆವ ಬಳಲುವ ಬರಡು ಜೀವ
ಸೋತಿದೆ ಜೀವನ ಸಂಕೋಲೆಯಲ್ಲಿ ಇಂದು
ಸಾವಿರ ಬಂಧುಗಳೆಲ್ಲ ದೂರ ದೂರ ಸರಿದು
ಕಾಡಿದೆ ಮನದಲಿ ಜೀವನ ಪರೀಕ್ಷೆಯು
ಸೋಲುತ ಕೊರಗಿದೆ ಮರಣದ ಬಲೆಯು
ಬೀಸಿದೆ ಭಯದಲಿ ಜೀವ ಬಿರುಗಾಳಿಯಲ್ಲಿ
ಕೆಣಕಿದೆ ಮನದಲಿ ನೋವಿನ ಸಂಕೋಲೆ....
ದೇಹವೆ ಸವೆಯುತ ಕೀಲುಗಳು ಮುರಿಯುತ
ಅಸ್ಥಿ ಪಂಜರದಲ್ಲಿ ಕೊರಗಿದೆ ನದಿ ತೀರದಲ್ಲಿ
ಓಹೋ..... ಓ ಓ ಓ........ ನನ್ನ ಬಾಂಧವರೆ
ಬನ್ನಿ ಬಾಂಧವರೆ ನನಗೆ ನೀಡಿ ಆಸರೆ
ತೇಲಿದೆ ಜೀವನ ಅಲೆಯು ಉಸಿರು ಮರೆಯಲಿ
ಹಸಿರು ಉದುರೋಗಿದೆ ಎದೆಯ ಒಡಲಲಿ
ಬಿಡದ ಹೃದಯವು ಮಿಡಿಯುತ ನಿಂತಿದೆ ಕ್ಷಣದಲಿ
ಕುಸಿದಿದೆ ಮನದಲಿ..... ಈ ಒಂಟಿ ಜೀವನ
ಜಿ ಟಿ ಆರ್ ದುರ್ಗ
ಜಿ ಹೆಚ್ ಎಲ್
ಬಂಗಾರಪೇಟೆ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments