* ಭಾರತೀಯರಿಗೆ ಮತದಾನ, ಡಾ. ಅಂಬೇಡ್ಕರರ ವರದಾನ :ಪ್ರೊ ಆರ್ ಎಮ್ ಮಾಲಗಾರ *

*  ಭಾರತೀಯರಿಗೆ ಮತದಾನ, ಡಾ. ಅಂಬೇಡ್ಕರರ ವರದಾನ  :ಪ್ರೊ ಆರ್ ಎಮ್ ಮಾಲಗಾರ *



ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಪ್ರತಿಷ್ಠಿತ ಎಸ್ ಪಿ ಎಮ್ ಕಲಾ, ವಾಣಿಜ್ಯ, ಮತ್ತು ವಿಜ್ಞಾನ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾರೂಗೇರಿ : 2023/ 24 ನೇ ಸಾಲಿನ 7 ದಿನಗಳ ವಿಶೇಷ ಸೇವಾ ಶಿಬಿರವನ್ನು ದತ್ತು ಗ್ರಾಮ ಅಳಗವಾಡಿಯಲ್ಲಿ ಆಯೋಜಿಸಲಾಗಿದೆ.  4 ನೇ ದಿನದ ಸಾಯಂಕಾಲ ಕಾರ್ಯಕ್ರಮ"ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವ "ಎಂಬ ವಿಷಯದ ಮೇಲೆ ಉಪನ್ಯಾಸ  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಎಸ್.ಪಿ.ಎಂ.ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಇತಿಹಾಸ ಉಪನ್ಯಾಸಕರಾದ ಪ್ರೊ ಆರ್ ಎಮ್ ಮಾಲಗಾರ ಮಾತನಾಡುತ್ತ ಸಂವಿಧಾನ ರಚನಾ ಸಭೆಯ ಸದಸ್ಯರು ಒಳಗೊಂಡು ಭಾರತದ ಸಂವಿಧಾನವನ್ನು ಅಂಗಿಕರಿಸಲಾಯಿತು ಎಂದು, ಸಂವಿಧಾನದ ಜಾಗ್ರತಿಯ ಬಗ್ಗೆ ಸ್ವಯಂ ಸೇವಕರಿಗೆ ತಿಳಿ ಹೇಳಿದರು.ಪ್ರತಿಯೊಬ್ಬ ನಾಗರಿಕನಿಗೆ ಮತದಾನದ ಹಕ್ಕನ್ನು ಸಂವಿಧಾನದ ಮೂಲಕ ಕೊಟ್ಟದ್ದು ಡಾ. ಬಾಬಾ ಸಾಹೇಬ ಅಂಬೇಡ್ಕರವರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಎಲ್ ಎಸ್ ಜುಗಳೆ, ದೈಹಿಕ ಶಿಕ್ಷಕರು ಸರಕಾರಿ ಪ್ರೌಢ ಶಾಲೆ, ಅಳಗವಾಡಿ ಇವರು ಮಾತನಾಡುತ್ತ ಎಲ್ಲವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ, ಸಾಮಾಜಿಕ ಸೇವಾ ಮನೋಭಾವನೆ ಮತ್ತು ಸಂಸ್ಕಾರ ಗುಣಗಳನ್ನು ಹೊಂದಿರಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಾಧಿಕಾರಿ ಪ್ರೊ ಭರತೇಶ ಕಾಂಬಳೆ,ಸಹ ಶಿಬಿರಾಧಿಕಾರಿ ಡಾ.ವಿಲಾಸ ಕಾಂಬಳೆ, ಪ್ರೊ ಆರ್ ಕೆ ಖಟಾಂವಿ ಉಪಸ್ಥಿತರಿದ್ದರು.ಕುಮಾರಿ ಶಾರದಾ ಬ್ಯಾಗಿ ಪ್ರಾರ್ಥನೆ ಮಾಡಿದರು. ಕು.ಸಂತ್ರಾಮ ಹಾಲಗೊಂಡ  ಸ್ವಾಗತಿಸಿದರು.ಕುಮಾರ ಕಲ್ಮೇಶ ಪೂಜೇರಿ ಪುಷ್ಪಾರ್ಪಣೆ ಮಾಡಿದರು. ಕು ಸಚೀನ ಜೋಡಟ್ಟಿ ವಂದನಾರ್ಪಣೆ ನಡೆಸಿಕೊಟ್ಟರು. ಕೊನೆಯದಾಗಿ ಕಾರ್ಯಕ್ರಮದ ನಿರೂಪಣೆಯನ್ನು ಸಂತ್ರಾಮ ಹಾಲ್ಗೊಂಡ ಅಚ್ಚು ಕಟ್ಟಾಗಿ ನಡೆಸಿಕೊಟ್ಟರು.


ವರದಿ :ಡಾ. ವಿಲಾಸ ಕಾಂಬಳೆ 

ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments