🐄 *ಮಣ್ಣೆತ್ತಿನ ಅಮಾವಾಸ್ಯೆ* 🐄

 🐄 *ಮಣ್ಣೆತ್ತಿನ ಅಮಾವಾಸ್ಯೆ* 🐄



ಕೃಷಿಕನ ಬದುಕಿಗೆ ಆಸರೆಯಾಗಿ 

ತನ್ನ ಜೀವವನ್ನೇ ಮುಡುಪಾಗಿಸಿ 

ಬೀಜ ಬಿತ್ತಲು ರೈತನ ಜೊತೆಯಾಗಿ 

 ಪೂಜಿಸೋ ಮಣ್ಣೆತ್ತಿನ ಅಮಾವಾಸ್ಯೆ ಯಿದು 


ಮಣ್ಣಿನಿಂದ ಎತ್ತುಗಳ ಮಾಡಿಸಿ 

ಚಿಕ್ಕ ತಟ್ಟೆಯಲ್ಲಿ ಪ್ರತಿಷ್ಟಾಪಿಸಿ 

ಅದರೊಳಗೆ ವೃಷಭವನ್ನಿರಿಸಿ 

ಶೋಡಶೋಪಚಾರಗಳಿಂದ ಪೂಜಿಸಿ 


ಮಣ್ಣೇ ತಾನೇ ನಮಗೆ ಹೊನ್ನು 

ಬೆಲೆಕಟ್ಟಲಾಗದ ಮಾಣಿಕ್ಯವನ್ನು 

ಅದೇ ಧಾನ್ಯ ಬೆಳೆಯೋ ಮೂಲವನ್ನು ಪೂಜಿಸಿ 

ರಾಸುಗಳಿಗೆ ಮೇವು ನೀಡುವ ಸಂಪ್ರದಾಯವದು 


ಕಾರ ಹುಣ್ಣಿಮೆ ಮಳೆ ಬಿದ್ದು ಬಿತ್ತನೆ ಮಾಡಿ 

ಮಣ್ಣೆತ್ತಿನ ಅಮಾವಾಸ್ಯೆಗೆ ಎತ್ತಿಗೆ ಸಿಂಗಾರ ಮಾಡಿ 

ವಿಶ್ರಾಂತಿ ಕೊಟ್ಟು ಮೇವು ನೀಡಿ 

ಪೂಜ್ಯ ಭಾವನೆಯಿಂದ ರಾಸುಗಳ ನೋಡಿ.


✍️ *ಮಳೆಬಿಲ್ಲು ಡಾ. ಲೀಲಾ ಗುರುರಾಜ್* ತುಮಕೂರು.

Image Description

Post a Comment

0 Comments