ಶೀರ್ಷಿಕೆ : *ಮನ್ನಿಸು*
ಓ ಇನಿಯನೇ ಇನ್ನಾದರೂ ನನ್ನನು ಮನ್ನಿಸೆಯ
ನಿನ್ನ ಮಾತಿಗೆ ಓಗೊಡ ದಿದ್ದಕ್ಕೆ ಮುನಿಸು ಮಾಡಿಕೊಂಡೆಯ
ನಾನಿದ್ದ ಪರಿಸ್ಥಿತಿ ನಿನಗೂ ಗೊತ್ತಿತ್ತು ಅರಿತೆಯ
ಆದರೂ ಏಕೀ ಮುನಿಸು ನಗು ಮೊಗವ ತೋರೆಯ
ನನಗೂ ಕಟ್ಟುಪಾಡುಗಳು ಇರುವುದೆಂದು ತಿಳಿದಿದೆ
ಅದ ತಪ್ಪಿಸಿ ಬರಲು ದೊಡ್ಡವರ ಕಣ್ ಬೇಲಿಯಿದೆ
ನೀರಿಗೆ ಹೋಗುವೆನೆಂದು ಕೊಡ ಹಿಡಿದು ಬಂದಿರುವೆ
ನೀನು ಜಾತಕ ಪಕ್ಷಿಯಂತೆ ಕಾದು ಕುಳಿತಿರುವೆ
ನಾ ಬರುವ ಗೆಜ್ಜೆ ಸದ್ದಿನಲೆ ಜಾಡ ಹಿಡಿದಿರುವೆ
ಹೊಂಚು ಹಾಕಿ ದಾರಿಗಡ್ಡ ಹಾಕಿರುವೆ
ಸಿಗದಲೆ ನಾ ಓಡಲು ನೀ ಮುಗಿ ಬಿದ್ದು ಬರಸೆಳೆದಿರುವೆ
ಎದೆಗಾನಿಸಿ ಅದರಕೆ ಸಿಹಿ ಮುತ್ತ ನೀಡಿರುವೆ
ನಿನ್ನ ಆ ನಸು ಮುನಿಸು ಮರೆಯಾಗಿದೆ
ಮುಖವರಳಿ ಸಂತೋಷದಿಂದ ತುಳುಕಾಡಿದೆ
ಕುಡಿಮೀಸೆ ಅಂಚಲ್ಲಿ ತುಂಟ ನಗೆಯಾಡಿದೆ
ಅಂತೂ ನಿನ್ನ ಮುನಿಸು ಕರಗಿ ಪ್ರೀತಿ ಉಕ್ಕಿದೆ.
✍️ *ಮಳೆಬಿಲ್ಲು ಡಾ. ಲೀಲಾ ಗುರುರಾಜ್* ತುಮಕೂರು.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments