"ಕನ್ನಡ ಸಾಹಿತ್ಯದಲ್ಲಿ ಹಾಸ್ಯ" ಉಪನ್ಯಾಸ ಕಾರ್ಯಕ್ರಮ*

 *"ಕನ್ನಡ ಸಾಹಿತ್ಯದಲ್ಲಿ ಹಾಸ್ಯ" ಉಪನ್ಯಾಸ ಕಾರ್ಯಕ್ರಮ* 



 ರಾಯಬಾಗ


 ಕನ್ನಡ ಸಾಹಿತ್ಯ ಪರಿಷತ್ತು ರಾಯಬಾಗ ಮತ್ತು ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಹಾರೂಗೇರಿ  ಸವಿ ನೆರಳಿನಲ್ಲಿ "ಕನ್ನಡ ಸಾಹಿತ್ಯದಲ್ಲಿ ಹಾಸ್ಯ" ವಿಶೇಷ ಉಪನ್ಯಾಸ ಕಾರ್ಯಕ್ರಮವು ಹಾರೂಗೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ದಿನಾಂಕ 18.07.2024ರಂದು ಮುಂಜಾನೆ 10 ಗಂಟೆಗೆ ಜರುಗಲಿದೆ.ನದಿ ಇಂಗಳಗಾವಿ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀ ಸಿದ್ದು ಅಥಣಿಯವರು ಉಪನ್ಯಾಸ ನೀಡಲಿದ್ದಾರೆ. ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಲ್ ಬಿ ಬನಶಂಕರಿಯವರು ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಸಾಂಸ್ಕೃತಿಕ ವಿಭಾಗದ ಸಂಚಾಲಕ ಡಾ. ರವಿ ಕೊಕಟನೂರˌ ಕನ್ನಡ ವಿಭಾಗದ ಮುಖ್ಯಸ್ಥ ಶ್ರೀ ಆರ್.ಎ.ಬಡಿಗೇರˌ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀ ರವೀಂದ್ರ ಪಾಟೀಲˌ ಗೌರವ ಕಾರ್ಯದರ್ಶಿಗಳಾದ ಶಂಕರ ಕ್ಯಾಸ್ತಿ ˌಟಿ ಎಸ್ ಒಂಟಗೂಡಿ ಉಪಸ್ಥಿತರಿರಲಿದ್ದಾರೆ.ಕನ್ನಡ ರಸಸ್ವಾಧನಿಗೆ ಕನ್ನಡ ಮನಸ್ಸುಗಳು ಆಗಮಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿ ಮಲ್ಲಪ್ಪ ಬಳವಾಡ ತಿಳಿಸಿದ್ದಾರೆ.


ವರದಿ : ಡಾ. ವಿಲಾಸ್ ಕಾಂಬಳೆ 

ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments