* ಗಜಲ್*

 *ಗಜಲ್* 



ಮುಖದಲಿ ನೂರು ಚಿಂತೆಯು ತುಂಬಿರಲು ಬಾಡುವುದು ಅಲ್ಲವೇ

ಸುಖದಿಂದ ಇರಲು ವಿಧಿಯು ಬಿಡದಿರಲು ಕಾಡುವುದು ಅಲ್ಲವೇ


ಬಣ್ಣ ಕಪ್ಪಗಿದ್ದರೇನಾಯಿತು ಮನಸಿನ ಭಾವನೆಗಳು ಅರಳಿಹುದು

ಕಣ್ಣಲಿ ಕನಸುಗಳು ಸುರಿದಿರಲು ಸಹಕರಿಸಿದರೆ ಹಾಡುವುದು ಅಲ್ಲವೇ.


ಹದಿಹರೆಯದ ಬಯಕೆಗಳಿಗೆ ಮದುವೆಯೆ ಒಂದೇ ಪರಿಹಾರ.

ಸುಧೆಯ ಸವಿ ಸಿಗದಿರೆ ಮನಸು ಕುದುರೆಯಂತೆ ಓಡುವುದು ಅಲ್ಲವೇ 


ಬಾಳದಾರಿಯಲಿ  ‌ಮುಳ್ಳುಗಳು ಚುಚ್ಚದಂತೆ ಹೆಜ್ಜೆಯಲಿ ಎಚ್ಚರಿಕೆ ಯಿರಬೇಕು

ನಾಳೆಯ ನಿರೀಕ್ಷೆಯಲಿ ಜೀವನದ ಪಯಣಕೆ ಸಜ್ಜಾಗಿ ನಡೆವುದು ಅಲ್ಲವೇ 


ಹೂಮಾಲೆ ಹೆಣೆಯುತ್ತಾ ಪುಷ್ಪಳ ಮನಸು ನಲುಗಿದೆ

ಕೋಮಲೆಯ ಮನದಲಿ ಮಧುರ ಮಿಲನದ ಕನಸು ನೋಡುವುದು ಅಲ್ಲವೇ .


✍️.. *ಸ್ನೇಹದ ಸಂಕೋಲೆ ಪುಷ್ಪ*

🌹🌹

Image Description

Post a Comment

0 Comments