🙏🙏 *ಓಂ ಶ್ರೀ ಶಾರದಾ ಗುರುಭ್ಯೋ ನಮಃ* 🙏🙏
ಶೀರ್ಷಿಕೆ : *ಶೃಂಗಾರ*
ನೀ ಮದನ ಮೋಹನಾಂಗಿಯು
ಸೌಂದರ್ಯ ತುಂಬಿರುವ ರತಿಯು
ಕಾಮನoಗಳದಿ ಅರಳಿರೋ ಲತೆಯು
ನಿನ್ನ ಸುಕೋಮಲ ಲತೆಗೆ ನಾ ಆಸರೆಯು
ನೀ ಚಂದಿರನ ಪಾರಿಜಾತವೇ
ನಿನ್ನಲ್ಲಿ ಕೇಸರಿಯಾಗಿ ಸೇರಿರುವೆ
ನೀಳ ಕೇಶರಾಷಿಯಿಂದ ಆಕರ್ಷಸಿರುವೆ
ಸಂಗಮಕೆ ಕರೆಯೋಲೆ ನೀ ನೀಡಿರುವೆ
ಶೃಂಗಾರ ಕಾವ್ಯದಿ ಕವನ ಬರೆದಿರುವೆ
ಬಾಹು ಬಂಧನವ ನೀಡಿ ಒಪ್ಪಿ ಅಪ್ಪಿರುವೆ
ಸೊಂಪಾದ ತನುವನು ಅರ್ಪಿಸಿರುವೆ
ಬೇಕೆಂದೇ ನಿನ್ನಯ ಪಾದವ ಚುಂಬಿಸಿರುವೆ
ಯಾವ ಹಮ್ಮು ಬಿಮ್ಮಿಲ್ಲದ ಸಮರ್ಪಣೆಯು
ಇಬ್ಬರಲ್ಲೂ ಧನ್ಯತಾ ಮೋಹದರ್ಪಣೆಯು
ಮೈ ಮನವ ಝೆoಕರಿಸೋ ಮಿಲನದರ್ಪಣೆಯು
ನಿನ್ನಂದಕೆ ಸೋತು ನೀಡಿರುವೆ ನಾ ಮುತ್ತಿನರ್ಪಣೆಯು
✍️ *ಮಳೆಬಿಲ್ಲು ಡಾ. ಲೀಲಾ ಗುರುರಾಜ್* ತುಮಕೂರು.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments