ಶೀರ್ಷಿಕೆ : *ನೀ ಇರಲು ಜೊತೆಯಲ್ಲಿ*

 ಶೀರ್ಷಿಕೆ : 

*ನೀ ಇರಲು ಜೊತೆಯಲ್ಲಿ*



ನೀ  ಇರಲು ಜೊತೆಯಲ್ಲಿ 

ಸಂತೋಷವೇ ಇರುವುದಲ್ಲಿ 

ನೋವು ಸಂಕಟಕ್ಕೆ ಜಾಗವೆಲ್ಲಿ 

ಹರುಷವೇ ತುಂಬಿರುವುದಲ್ಲಿ 


ಮಾಗಿಯ ಕಾಲದ ಬಿಸಿಯಂತೆ 

ಬಿಸಿಲ ಬೇಗೆಯ ನೆರಳಿನoತೆ 

ಮಳೆಗಾಲದ ಮಿಂಚು ಕಂಡಂತೆ 

ಬೆಚ್ಚನೆ ಹೊದಿಕೆ ಹೊದ್ದಂತೆ 


ಸೂರ್ಯನ ಕಂಡ ತಾವರೆ ಯಂದದಿ ಅರಳುವೆ 

ಚಂದ್ರನ ಕಾಯುವ ನೈದಿಲೆ ಯಂತೆ ಬೆಳಗುವೆ 

ಹೂಜೇನ ಕಂಡ ಮರಿ ದುಂಬಿ ಯಂತೆ 

ಕಾಯುವೆನು ನಾನು ಜಾತಕ ಪಕ್ಷಿಯಂತೆ 


ನೀ ಬರುವ ಹಾದಿಯು ಹಬ್ಬದ ಸಡಗರ ತುಂಬಿಹುದು ಮಲ್ಲ 

ದಾರಿಯಲಿ ಹೂ ರಾಶಿ ಹಾಸಿ ಮೃದು ವಾಗಿಹುದು ಮೆಲ್ಲ 

ಹಸಿರ ತೋರಣವ ಕಟ್ಟಿದಂತೆ ಸ್ವಾಗತ ಬಯಸಿಹುದು ನಲ್ಲ 

ನೀಬಂದು ತಮ್ಮೆಲರವ ಬೀರುತ ನಸುನಗುವನು ಚೆಲ್ಲು.


✍️ *ಮಳೆಬಿಲ್ಲು ಡಾ. ಲೀಲಾ ಗುರುರಾಜ್* ತುಮಕೂರು.

Image Description

Post a Comment

0 Comments