* ನೊಂದವರ ನಂದಾ ದೀಪ, ಬೆಂದವರ ಭಾಗ್ಯ ದೇವತೆ, ವಿಶ್ವಗುರು ಬಸವಣ್ಣ :ಪ್ರೊ ಎಸ್ ಬಿ ಕಲಚಿಮ್ಮಡ *


 ನೊಂದವರ ನಂದಾ ದೀಪ, ಬೆಂದವರ ಭಾಗ್ಯ ದೇವತೆ, ವಿಶ್ವಗುರು ಬಸವಣ್ಣ :ಪ್ರೊ ಎಸ್ ಬಿ ಕಲಚಿಮ್ಮಡ 


ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಪ್ರತಿಷ್ಠಿತ ಎಸ್ ಪಿ ಎಮ್ ಕಲಾ, ವಾಣಿಜ್ಯ, ಮತ್ತು ವಿಜ್ಞಾನ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾರೂಗೇರಿ : 2023/ 24 ನೇ ಸಾಲಿನ 7 ದಿನಗಳ ವಿಶೇಷ ಸೇವಾ ಶಿಬಿರವನ್ನು ದತ್ತು ಗ್ರಾಮ ಅಳಗವಾಡಿಯಲ್ಲಿ ಆಯೋಜಿಸಲಾಗಿದೆ.  5 ನೇ ದಿನದ ಉಪನ್ಯಾಸ ಸಾಯಂಕಾಲ ಕಾರ್ಯಕ್ರಮ"ಬಸವಣ್ಣನವರ ವಚನಗಳಲ್ಲಿ ವೈಚಾರಿಕತೆ "ಎಂಬ ವಿಷಯದ ಮೇಲೆ ಉಪನ್ಯಾಸ  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ  ಪ್ರೊ ಎಸ್ ಬಿ ಕಲಚಿಮ್ಮಡ ಮಾತನಾಡುತ್ತ ಮೊಟ್ಟ ಮೊದಲು ಸಮಾಜದಲ್ಲಿ ಸಮಾನತೆ ತಂದದ್ದು ಬಸವಣ್ಣನವರು.ಕಾಯಕವೇ ಕೈಲಾಸವೆಂದು ಜಗತ್ತಿಗೆ ಸಾರಿ ಹೇಳಿ, ಮಹಾ ಮಾನವತಾವಾದಿಯಾಗಿ, ಜನರ ಮನಸಿನಲ್ಲಿ ಅಜರಾಮರಾಗಿ ಉಳಿದಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ಬಿ ಆರ್ ಠೋಮರೆ ಇವರು ಮಾತನಾಡುತ್ತ ಎಲ್ಲವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ, ಸಾಮಾಜಿಕ ಸೇವಾ ಮನೋಭಾವನೆ ಮತ್ತು ಸಂಸ್ಕಾರ ಗುಣಗಳನ್ನು ಹೊಂದಿರಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಶಿಬಿರಾಧಿಕಾರಿ ಪ್ರೊ ಭರತೇಶ ಕಾಂಬಳೆ,ಸಹ ಶಿಬಿರಾಧಿಕಾರಿ ಡಾ.ವಿಲಾಸ ಕಾಂಬಳೆ, ಪ್ರೊ ಕೆ ಎಸ್ ಭಜಂತ್ರಿ ಉಪಸ್ಥಿತರಿದ್ದರು.ಕುಮಾರಿ ಶಾರದಾ ಬ್ಯಾಗಿ ಪ್ರಾರ್ಥನೆ ಮಾಡಿದರು. ನಾಗೇಶ್ ಹಂಜಗಿ ಸ್ವಾಗತಿಸಿದರು.ಸಚೀನ ಜೋಡಟ್ಟಿ ಪುಷ್ಪಾರ್ಪಣೆ ಮಾಡಿದರು.ಸಂಪ್ರಿತಾ ಪಾಟೀಲ್ ವಂದನಾರ್ಪಣೆ ನಡೆಸಿಕೊಟ್ಟರು. ಕೊನೆಯದಾಗಿ ಕಾರ್ಯಕ್ರಮದ ನಿರೂಪಣೆಯನ್ನು ಸಂತ್ರಾಮ ಹಾಲ್ಗೊಂಡ ಅಚ್ಚು ಕಟ್ಟಾಗಿ ನಡೆಸಿಕೊಟ್ಟರು.


ವರದಿ :ಡಾ. ವಿಲಾಸ ಕಾಂಬಳೆ 

ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments