* ಸಾಮಾಜಿಕ ಸಮಾನತೆಯಿಂದ ಲಿಂಗಸಮಾನತೆ ಸಾಧ್ಯ *

 ಸಾಮಾಜಿಕ ಸಮಾನತೆಯಿಂದ ಲಿಂಗಸಮಾನತೆ ಸಾಧ್ಯ


: ಸುಜಾತಾ ಬಿ.ಪಾಟೀಲ್


ಚಿಕ್ಕೋಡಿ : ಸಮಾಜದಲ್ಲಿ ಪ್ರತಿಯೊಂದು ರಂಗದಲ್ಲಿಯೂ ಸಹ ಅಸಮಾನತೆ ತಾಂಡವಾಡುತ್ತಿರುವ ಈ ಸಂದರ್ಭದಲ್ಲಿ ಸಾಮಾಜಿಕ ಸಮಾನತೆ ಉಂಟಾದರೆ ಮಾತ್ರ ಲಿಂಗಸಮಾನತೆ ಬರಲು ಸಾಧ್ಯವಾಗುತ್ತದೆ ಎಂದು ಗೋಕಾಕ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕರಾದ ಸುಜಾತ ಬಿ. ಪಾಟೀಲ್ ತಿಳಿಸಿದರು 


ಬುಧವಾರ ಚಿಕ್ಕೋಡಿ ತಾಲೂಕಿನ ಬೇಡಿಕಿಹಾಳದ ಶ್ರೀಮತಿ ಕುಸುಮಾವತಿ ಮಿರಜಿ ಕಲ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮತ್ತು ಮಹಿಳಾ ಎಂಪವರ್ಮೆಂಟ್ ವಿಭಾಗವು ಆಯೋಜಿಸಿದ ಲಿಂಗ ಸಮಾನತೆ ವಿಶೇಷ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.


ಈ ಸಮಾಜದಲ್ಲಿ ಸಮಾನತೆ ಮುಖ್ಯ. ಪುರುಷ ಮತ್ತು ಮಹಿಳೆಯರಲ್ಲಿ ಮೇಲು ಕೀಳು ಎಂಬ ತಾರತಮ್ಯ ಬರಬಾರದು. ಪುರುಷನಷ್ಟೇ ಮಹಿಳೆಯು ಸಹ ಎಲ್ಲಾ ರಂಗದಲ್ಲಿಯೂ ಸಮರ್ಥಳಾಗಿದ್ದಾಳೆ ಎಂಬ ನಂಬಿಕೆ ಬಂದಾಗ ಹಾಗೂ ಅವಕಾಶ ನೀಡಿದಾಗ ಲಿಂಗ ಅಸಮಾನತೆ ಹೋಗಿ ಲಿಂಗ ಸಮಾನತೆಯಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಮಹಿಳೆಯರು ಸಮಾನತೆಯನ್ನು ಸಾಧಿಸಬೇಕಾದರೆ ವಾಸ್ತವ ಸ್ಥಿತಿಯ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು, ಜ್ಞಾನವನ್ನು ರಚಿಸಿಕೊಳ್ಳಬೇಕು. ಜೊತೆಗೆ ಒಗ್ಗಟ್ಟಿನಿಂದ ತನ್ನ ಹಕ್ಕನ್ನು ಪ್ರತಿಪಾದಿಸಿಕೊಂಡಾಗ ಮಾತ್ರ ಲಿಂಗಸಮಾನತೆಯಾಗಲು ಸಾಧ್ಯವಾಗುತ್ತದೆ. ಜೊತೆಗೆ ಸಮಾಜದ ಮುಖ್ಯವಾಣಿ ಬರಲು ಕಾರಣವಾಗುತ್ತದೆ. 


ಸಮಾಜವು ಮಹಿಳೆ ಮತ್ತು ಪುರುಷ ಎನ್ನುವ ಭೇದವನ್ನು ಕೃತಕವಾಗಿ ನಿರ್ಮಾಣ ಮಾಡಿ ಕೊಂಡಿದೆ. ಈ ಕೃತಕಥೆಯನ್ನು ಒಡೆಯಬೇಕಾಗಿದೆ. ಇದನ್ನು ಸಂಪೂರ್ಣವಾಗಿ ನಿರ್ಮಾಣ ಮಾಡಬೇಕಾದರೆ ಪ್ರತಿಯೊಬ್ಬ ಹೆಣ್ಣು ಮಗು ಶಿಕ್ಷಣವನ್ನು ಪಡೆದುಕೊಂಡಾಗ ಮಾತ್ರ ಅದು ಸಾಧ್ಯವಾಗುತ್ತದೆ. ಶಿಕ್ಷಣದಿಂದ ಅರಿವನ್ನು ಸಂಪಾದಿಸಿ ತನ್ನ ಅತ್ಯುತ್ವಕ್ಕಾಗಿ ಹೋರಾಟವನ್ನು ಮಾಡಿ ಸಮಾನತೆ ಪಡೆಯಬೇಕಾಗಿದೆ ಎಂದು ಹಲವು ಚಿತ್ರಗಳನ್ನು ಹೊಂದಿರುವ  ಸ್ಲೈಡ್ ಗಳ ಮೂಲಕ ವಿವರಿಸಿದರು. 


ಸಮಾಜ ಕುಟುಂಬ ಸಂಸ್ಕೃತಿ ಧರ್ಮ ಶಾರೀರಿಕ ಭಿನ್ನತೆ ಲಿಂಗ ಅಸಮಾನತೆಗೆ ಕಾರಣವಾಗಿವೆ. ಇವುಗಳನ್ನು ಹೋಗಲಾಡಿಸಿಕೊಳ್ಳಲು ಮಾನವ ಹಕ್ಕುಗಳ ಘೋಷಣೆಯೇ ೧೯೪೯ ಆಕ್ಟ್ ನಾ ಪ್ರಕಾರ ಮಹಿಳೆಯರಿಗೂ ಹಕ್ಕುಗಳಿವೆ ಎಂದು ತಿಳಿಸುತ್ತಾ ಮಹಿಳಾ ಸಬಲೀಕರಣವಾಗಬೇಕೆಂದು ಕರೆ ನೀಡಿದರು. ಇದರೊಂದಿಗೆ ಲಿಂಗ ಅಸಮಾನತೆಯ ಅಡೆತಡೆಗಳನ್ನು ಹೋಗಲಾಡಿಸುವ ಮತ್ತು ಲಿಂಗಸಮಾನತೆಯನ್ನು ಸಲ್ಲಿಸುವುದು ಹೇಗೆ ಎಂದು ಒಂದು ಗಂಟೆ ಹೆಚ್ಚು ಕಾಲ ಉಪನ್ಯಾಸ ನೀಡಿದರು.


ಈ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಕಿರಣ ಬಿ ಚೌಗಲೆ ಅವರು ಮಾತನಾಡುತ್ತಾ ಸಮಾಜ ಹೆಣ್ಣಿನ ಮೇಲೆ ವಿಧಿಸಿರುವ ಅಡೆತಡೆಗಳನ್ನು ಮೀರಿ ಪುರುಷ ಪ್ರಧಾನದ ವ್ಯವಸ್ಥೆಯಲ್ಲಿ ಸ್ತ್ರೀ ಪ್ರಧಾನ ವ್ಯವಸ್ಥೆ ಸಮಾಜ ನಿರ್ಮಾಣವಾಗಬೇಕೆಂದು ಮಾತನಾಡಿದರು.


ಮಹಿಳಾ ಎಂಪವರ್ ಮೆಂಟ್ ವಿಭಾಗದ ಸಂಚಾಲಕರಾದ ಪ್ರೊ. ಮಲ್ಲಿಕಾ ಪ್ರಸ್ತಾವಿಕ ಮಾತುಗಳಾಡಿದರು. ಪ್ರೊ.ಅಶ್ವಿನಿ ಪಾಟೀಲ್, ಪ್ರೊ.ಅರ್ಚನಾ ಚೌಗುಲೆ ಪ್ರೊ .ವಿನಾಯಕ ಮಾದಿಗ, ಪ್ರೊ.ದೀಪಕ್ ಬುರುಡ್, ಡಾ.ಸವದಿ, ಪ್ರೊ .ಚೈತ್ರ, ಪ್ರೊ.ಬಸವರಾಜ್ ಇಟ್ನಾಳ್,  ಪ್ರೊ ಪ್ರವೀಣ್ ದೇಸಾಯಿ, ಡಾ.ಹೊಂಬಯ್ಯ ಹೊನ್ನಲಗೆರೆ ಇನ್ನಿತರ ಪ್ರಾಧ್ಯಾಪಕ ಮತ್ತು ಪ್ರಾಧ್ಯಾಪಕೇತರರು ಉಪಸ್ಥಿತರಿದ್ದರು.


 ಧನುಶ್ರೀ ಚೌಗುಲೆ ಸ್ವಾಗತಿಸಿದರು, ಲಕ್ಷ್ಮಿ ಪಾಟೀಲ್ ಅತಿಥಿ ಪರಿಚಯ ಮಾಡಿದರು. ಪ್ರಣಾಲಿ ಮಗುದುಂ ವಂದಿಸಿದರು. ಅಸ್ಮಿತೆ ಶಾಸ್ತ್ರಿ ನಿರೂಪಿಸಿದರು. ನೂರಾರು ವಿದ್ಯಾರ್ಥಿಗಳು ಭಾಗವಹಿಸಿದರು.


ವರದಿ : ಡಾ. ವಿಲಾಸ ಕಾಂಬಳೆ 

ಕನ್ನಡ ಉಪನ್ಯಾಸಕರು 

ಹಾರೂಗೇರಿ

Image Description

Post a Comment

0 Comments