* ಪ್ರೊ ಆರ್ ಎಮ್ ಮಾಲಗಾರ ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ * *ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವ *

 * ಪ್ರೊ ಆರ್ ಎಮ್ ಮಾಲಗಾರ ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ * *ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವ *



ರಾಯಬಾಗ ತಾಲೂಕಿನ ಪ್ರತಿಷ್ಠಿತ ಎಸ್ ಪಿ ಎಮ್ ಕಲಾ, ವಾಣಿಜ್ಯ, ವಿಜ್ಞಾನ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾರೂಗೇರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ, ದತ್ತು ಗ್ರಾಮವಾದ ಅಳಗವಾಡಿಯಲ್ಲಿ 4 ನೇ ದಿನವಾದ ಇಂದು ಸಾಯಂಕಾಲ 4 ಘಂಟೆಗೆ ಪ್ರೊ ಆರ್ ಎಮ್ ಮಾಲಗಾರ ಅವರು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು *ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವ * ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಹೇಶ್ ಐಹೊಳೆ, ಮುಖ್ಯೋಪಾಧ್ಯಾಯರು, ಪ್ರತಿಭಾ ವಸಂತಾರಾವ ಪಾಟೀಲ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಹಾರೂಗೇರಿ ಇವರು ವಹಿಸಲಿದ್ದು, ಪ್ರೊ ಕೆ ಎಸ್ ಭಜಂತ್ರಿ, ಪ್ರೊ ಎಲ್ ಸಿ ಬಿರಾದರ ಉಪಸ್ಥಿತರಿರುವರು , ಕಾರ್ಯಕ್ರಮ ನಿರ್ವಹಣೆಯನ್ನು ಪ್ರೊ ಆರ್ ಕೆ ಖಟಾಂವಿ ನಿರ್ವಹಿಸಲಿದ್ದಾರೆಂದು ಎನ್ ಎಸ್ ಎಸ್ ಶಿಬಿರಾಧಿಕಾರಿಗಳಾದ ಪ್ರೊ ಬಿ ಎ ಕಾಂಬಳೆ ಮತ್ತು ಸಹ ಶಿಬಿರಾಧಿಕಾರಿಗಳಾದ ಡಾ. ವಿಲಾಸ ಕಾಂಬಳೆ ಪತ್ರಿಕಾ ಪ್ರಕಠಣೆಯಲ್ಲಿ ತಿಳಿಸಿದ್ದಾರೆ.


ವರದಿ : ಬಸವೇಶ್ವರಿ ಕಾಂಬಳೆ 

ಹಾರೂಗೇರಿ

Image Description

Post a Comment

0 Comments