🙏🙏 *ಓಂ ಶ್ರೀ ಶಾರದಾ ಗುರುಭ್ಯೋ ನಮಃ* 🙏🙏
ಶೀರ್ಷಿಕೆ : *ಕಣ್ಣುಗಳು*
ಕಣ್ಣೆರಡು ಕಮಲಗಳಂತೆ
ಬಿಳಿಯ ಮೀನಾಕಾರದಂತೆ
ಮಧ್ಯೆ ಕಪ್ಪು ಗೋಲಿಯಂತೆ
ಅದ ರೆಪ್ಪೆಯು ಕಾಪಾಡುವಂತೆ
ಪಂಚೆoದ್ರೀಯಣಾಮ್ ನಯನo ಪ್ರಧಾನವು
ಎನ್ನುವಂತೆ ಶ್ರೇಷ್ಠತೆಯನ್ನು ಪಡೆದಿಹವು
ನೋಡುಗರ ಸೂಜಿಗಲ್ಲಿನಂತೆ ಸೆಳೆದಿಹವು
ವಶೀಕರಣ ವಿದ್ಯೆಗೆ ಮೂಲ ಕಾರಣವು
ದೇವರು ಕೊಟ್ಟ ಸುಂದರ ಆಕಾರವಿದೆ
ಮನುಷ್ಯರನು ಮೋಡಿ ಮಾಡುವ ಶಕ್ತಿಯಿದೆ
ಇದಿಲ್ಲದಿದ್ದರೆ ಜಗತ್ತೇ ಕತ್ತಲು ಶೂನ್ಯ ವಾಗಿ ಕಂಡಿದೆ
ಅದ ಊಹೆ ಮಾಡಿಕೊಳ್ಳಲು ಅಸಾಧ್ಯವಾಗಿದೆ
ಕಣ್ಣಿಲ್ಲದವರಿಗೆ ಅದರ ಮಹತ್ವ ತಿಳಿಯುವುದು
ಭಾಷೆ ತಿಳಿಯದಿದ್ದರೂ ಕಣ್ಣುಗಳು ಅರಿಯುವುದು
ವದನದ ಅಂದಕ್ಕೆ ಕಣ್ಣೆ ಸೌಂದರ್ಯವಾಗಿದೆ
ಎಲ್ಲರಿಗೂ ದಾರಿ ದೀಪವಾಗಿದೆ
✍️ *ಮಳೆಬಿಲ್ಲು ಡಾ. ಲೀಲಾ ಗುರುರಾಜ್* ತುಮಕೂರು.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments