*ಅಚ್ಚ ಕನ್ನಡದ ನಿರೂಪಕಿ ಅಪರ್ಣ ರ ಅರ್ಪಣೆ*
ಅಪರ್ಣ ನೀ ಮಾಡಿದೆ ಜೀವಾರ್ಪಣೆ
ಕನ್ನಡ ಭಾಷೆಯ ಸ್ವಚ್ಛ ಉಚ್ಚಾರಣೆ
ಖ್ಯಾತ ನಿರೂಪಕಿಯಾಗಿ ಒಕ್ಕಣೆ
ನಿಮಗೆ ನಮ್ಮೆಲ್ಲರ ಪ್ರೀತಿ ನಮನದರ್ಪಣೆ
ತಂದೆ ನಾರಾಯಣ ಸ್ವಾಮಿಯ ಪುತ್ರಿಯಾದೆ
ಸಿನಿಮಾ ರಂಗವನ್ನು ಪ್ರವೇಶಿಸಿದೆ
ಪುಟ್ಟಣ್ಣ ಕಣಗಾಲರ ಗರಡೀಲಿ ಪಳಗಿದೆ
ಅಚ್ಚ ಕನ್ನಡತಿ ಎಂಬ ಬಿರು
ದಾoಕಿತಳಾದೆ
ಮಸಣದ ಹೂ ನಿಂದ ಸಿನಿಮಾ ತೆರೆಗೆ ಬಂದೆ
ಇನ್ಸ್ಪೆಕ್ಟರ್ ವಿಕ್ರಂ ಚಿತ್ರದಲ್ಲೂ ನಟಿಸಿದೆ
ಮಜಾ ಟಾಕೀಸಿನಲ್ಲಿ ಎಲ್ಲರ ನಕ್ಕು ನಲಿಸಿದೆ
ಚಂದನ ವಾಹಿನಿಯ ಶ್ರೇಷ್ಠ ನಿರೂಪಕಿಯಾದೆ
ಕರುನಾಡು ಕಂಡ ಅಪರೂಪದ ಕಣ್ಮಣಿ
ಕೊನೆಯವರೆಗೂ ಸಕ್ರಿಯ ರಾಗಿದ್ದ ಚಿನ್ಮಣಿ
ಕನ್ನಡ ಭಾಷೆಯ ಹೋರಾಟದ ಗಣಿ
ಕನ್ನಡ ನಾಡಿಗೆ ತುಂಬಲಾರದ ನಷ್ಟ ಈ ಹೆಣ್ಮಣಿ
✍️ *ಮಳೆಬಿಲ್ಲು ಡಾ. ಲೀಲಾ ಗುರುರಾಜ್* ತುಮಕೂರು
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments