*ವಿವೇಕ ಬಿ.ಪಾಟೀಲˌ ಪ್ರಿಯಾ ಮುದವಿ ಚಿಕ್ಕೂಡ ಶಾಲೆಯ ಕಾರ್ಯದರ್ಶಿಗಳಾಗಿ ಆಯ್ಕೆ*
ರಾಯಬಾಗ
ಅಥಣಿ ತಾಲೂಕಿನ ಚಿಕ್ಕೂಡದ ಸರಕಾರಿ ಪ್ರೌಢ ಶಾಲೆಯಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ಅಡಿಯಲ್ಲಿ ಸನ್ 2024-25 ನೆಯ ಸಾಲಿನ ಶಾಲಾ ಸಂಸತ್ತು ರಚನೆ ಮಾಡಲಾಯಿತು.
ವಿದ್ಯಾರ್ಥಿಗಳು ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.ವಿದ್ಯಾರ್ಥಿ ಮತದಾರರು ಆಧಾರ ಕಾರ್ಡ್ ಗುರುತಿನ ಚೀಟಿ ತೋರಿಸಿ ಮತದಾನ ಮಾಡಿದರು.ಶಾಲಾ ಸಂಸತ್ತಿನ ಚುನಾವಣಾ ಪ್ರಕ್ರಿಯೆಯು ಮಕ್ಕಳ ಮೆದುಳಿನಲ್ಲಿ ಚುನಾವಣಾ ಸಾಕ್ಷರತೆಯ ಮುದ್ರೆ ಹಾಕಿತು.ಪ್ರಧಾನ ಕಾರ್ಯದರ್ಶಿಯಾಗಿ ವಿವೇಕ ಷಣ್ಮುಖ ಬಿ.ಪಾಟೀಲˌಮಹಿಳಾ ಕಾರ್ಯದರ್ಶಿಯಾಗಿ ಪ್ರಿಯಾ ಮುತ್ತಪ್ಪ ಮುದವಿ ಚುನಾಯಿತರಾದರು.ಪೃಥ್ವಿರಾಜ ಷಣ್ಮುಖ ಕೋಳಿಗುಡ್ಡ ಆರೋಗ್ಯ ಕಾರ್ಯದರ್ಶಿˌಆಕಾಶ ಮಲ್ಲಪ್ಪ ಮಾಳಿ ಪ್ರವಾಸ ಕಾರ್ಯದರ್ಶಿˌಪುಷ್ಪಾ ರಮೇಶ ವಡ್ಡರ ಶಿಸ್ತು ಮತ್ತು ಸ್ವಚ್ಛತೆˌಸೃಷ್ಟಿ ಅಶೋಕ ಮಗದುಮ್ಮ ಬಿಸಿಯೂಟ ಕಾರ್ಯದರ್ಶಿˌಪ್ರಜ್ವಲ ಮಲ್ಲಪ್ಪ ತೇಲಿ ಕ್ರೀಡಾ ಕಾರ್ಯದರ್ಶಿˌಸಾಕ್ಷಿ ಮಾಂತಯ್ಯ ಮಠಪತಿ ಸಾಂಸ್ಕೃತಿಕ ಕಾರ್ಯದರ್ಶಿˌಸಂದೀಪ ಬಡಿಗೇರ ಪರಿಸರ ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ.ನೂತನ ಶಾಲಾ ಸಂಸತ್ತು ಸದಸ್ಯರಿಗೆ
ಶಾಲಾ ಸಂಸತ್ತು ಉಸ್ತುವಾರಿ ಶಿಕ್ಷಕ ಎಸ್.ಎಸ್.ಕಾಂಬಳೆ ಕಾರ್ಯ ಹಂಚಿಕೆ ಮಾಡಿ ಸಲಹೆ ಸೂಚನೆಗಳನ್ನು ನೀಡಿದರು.ಆಯ್ಕೆಯಾದ ವಿದ್ಯಾರ್ಥಿ/ನಿ ಪ್ರತಿನಿಧಿಗಳಿಗೆ ಎಸ್.ಡಿ.ಎಮ್.ಸಿ ಅಧ್ಯಕ್ಷ ಲಕ್ಷ್ಮಣ ಪಾಟೀಲˌಸದಸ್ಯರುˌಮುಖ್ಯೋಪಾಧ್ಯಾಯ ರವೀಂದ್ರ ಪಾಟೀಲ ಮತ್ತು ಶಿಕ್ಷಕರು ಶುಭ ಹಾರೈಸಿ ಅಭಿನಂದಿಸಿದ್ದಾರೆ.
ವರದಿ : ಡಾ. ವಿಲಾಸ ಕಾಂಬಳೆ
ಕನ್ನಡ ಉಪನ್ಯಾಸಕರು
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments