🙏🙏 *ಓಂ ಶ್ರೀ ಶಾರದಾ ಗುರುಭ್ಯೋ ನಮಃ* 🙏🙏
ಶೀರ್ಷಿಕೆ : *ಕಾಮನ ಬಿಲ್ಲು*
ಏಳು ಬಣ್ಣಗಳಿಂದ ತುಂಬಿದೆಯು
ಬಿಸಿಲು ಮಳೆಯಲಿ ಬರುವುದು
ಆಕಾಶದಲ್ಲಿ ದೊಡ್ಡ ಕಮಾನು ಕಟ್ಟಿದೆಯು
ಮಕ್ಕಳಿಗೆ ಅದ ನೋಡಿ ಕುಣಿಯುವ ಖುಷಿಯು
ಅದರಂತೆ ಬಾಳಲ್ಲಿ ನೀ ಬಂದೆ
ರಂಗುಗಳ ಸರಮಾಲೆ ತಂದೆ
ಕೋಮಲೆಯಾದ ನನ್ನ ನಾಚಿಸಿದೆ
ನಿನಾರೋ ಮನ್ಮಥನ ಮಗನೇ ಎನಿಸಿದೆ
ಉಕ್ಕಿ ಹರಿಯುವ ಪ್ರಾಯವು
ಸಂಗಾತಿಯಾದ ಹರಯವು
ಸೇರಿ ಮಾಡಿದೆ ಕಾಮನ ಹಬ್ಬವು
ಮನದಲ್ಲೆದ್ದ ರಂಗಿನ ಓಕುಳಿಯು
ಬರಸೆಳೆದು ತಬ್ಬಿದ ನಿನ್ನ ತುಂಟಾಟಿಕೆಯು
ತಾಳದಾದೆ ಬಿಸಿಯುಸಿರಿನ ಭಾರದೆದೆಯು
ಅಪ್ಪಿ ಮುದ್ದಾಡಿದೆ ಚೂರು ಜಾಗ ಬಿಡದೆಯು
ನಾ ಸೋತು ಪೂರೈಸಿದೆ ನಿನ್ನ ಮದನನ ಬಯಕೆಯು
✍️ *ಮಳೆಬಿಲ್ಲು ಲೀಲಾ ಗುರುರಾಜ್* ತುಮಕೂರು.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments