ಬಾಗಲಕೋಟೆ :ಜೂನ್ 29 : ಗ್ರಾಮಗಳ ಉದ್ದಾರವಾಗದಿದ್ದರೆ, ದೇಶದ ಉದ್ದಾರ ಸಾಧ್ಯವಿಲ್ಲ : ಪ್ರೊ ಬಸವರಾಜ ಆರ್ ಪಾಟೀಲ್
ಗ್ರಾಮಗಳ ಉದ್ಧಾರವಾಗದಿದ್ದರೆ ದೇಶದ ಉದ್ದಾರ ಸಾಧ್ಯವಿಲ್ಲ ಎಂದು ರಾಜಕೀಯ ವಿಶ್ಲೇಷಕರು ಹಾಗೂ ನಿವೃತ್ತ ಪ್ರಾಚಾರ್ಯರಾದ ಪ್ರೊ ಬಸವರಾಜು ಆರ್ ಪಾಟೀಲರವರು ಅಭಿಪ್ರಾಯಪಟ್ಟರು. ಅವರು ಇಲ್ಲಿನ ಬಸವೇಶ್ವರ ಕಲಾಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕವು ಸಮೀಪದ ಮುಚ್ಕಂಡಿ ಗ್ರಾಮದಲ್ಲಿ ಏರ್ಪಡಿಸಿರುವ ವಾರ್ಷಿಕ ವಿಶೇಷ ಶಿಬಿರದಲ್ಲಿ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.ಇಂದಿನ ಸಂದರ್ಭದಲ್ಲಿ ಅತಿ ಹೆಚ್ಚಾಗಿ ಬಳಕೆಯಾಗುತ್ತಿರುವ ಯಶಸ್ಸು ಎಂಬುದು ಶ್ರೀಮಂತಿಕೆಯಲ್ಲ,ಅದು ಮನಸ್ಸಿನ ಆತ್ಮ ತೃಪ್ತಿ ಆಗಿರುತ್ತೆ ಎಂದು ಅವರು ಅಭಿಪ್ರಾಯ ಪಟ್ಟರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯರಾದ ಪ್ರೊ ಎಸ್ ಆರ್ ಮೂಗನೂರು ಮಠ ಅವರು ಮಾತನಾಡುತ್ತಾ,ಇಂದಿನ ದಿನಗಳಲ್ಲಿ ವಿದ್ಯಾರ್ಥಿ ಯುವಜನಾಂಗವು ಸೇವಾ ಮನೋಭಾವವನ್ನು ಹೊಂದಿರಬೇಕು,ಅಂತಹ ಸೇವಾ ಮನೋಭಾವವನ್ನು ಇಂತಹ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಕಲ್ಪಿಸುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಐ ಕ್ಯೂ ಏ ಸಿ ಸಂಯೋಜಕರಾದ ಡಾ ಅಪ್ಪು ರಾಥೋಡ್ ಸೇರಿದಂತೆ ಬೋಧಕರು ಬೋಧಕೇತರ ಸಿಬ್ಬಂದಿ ಹಾಗೂ ಎನ್ಎಸ್ಎಸ್ ಸಂಯೋಜಕರು ಭಾಗವಹಿಸಿದ್ದರು. ಎನ್ಎಸ್ಎಸ್ ಘಟಕ ಒಂದರ ಅಧಿಕಾರಿಗಳಾದ ಪ್ರೊ ಎಂಎಚ್ ವಡ್ಡರ ಸ್ವಾಗತಿಸಿದರು.ಎನ್ಎಸ್ಎಸ್ ಘಟಕ ಎರಡರ ಅಧಿಕಾರಿಗಳಾದ ವಿರುಪಾಕ್ಷಿ ಏನ್ ಬಿ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವರದಿ :ಡಾ. ವಿಲಾಸ ಕಾಂಬಳೆ
ಕನ್ನಡ ಉಪನ್ಯಾಸಕರು
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments