ಪರೀಕ್ಷಾ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದ ಚಿಕ್ಕೂಡ ಶಾಲೆಯ ಬಹುಮುಖ ಪ್ರತಿಭೆ ಸಾವಿತ್ರಿ ಮಾಳಿ.*

 *ಪರೀಕ್ಷಾ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದ ಚಿಕ್ಕೂಡ ಶಾಲೆಯ ಬಹುಮುಖ ಪ್ರತಿಭೆ ಸಾವಿತ್ರಿ ಮಾಳಿ.* 



ರಾಯಬಾಗ


ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆ 1 ರ ಫಲಿತಾಂಶ 98.30% ರಷ್ಟಾಗಿದ್ದು ಪರೀಕ್ಷೆಗೆ ಹಾಜರಾಗಿದ್ದ 59 ವಿದ್ಯಾರ್ಥಿಗಳಲ್ಲಿ 58 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಗಮನಾರ್ಹ ಸಾಧನೆಗೈದಿದ್ದಾರೆಂದು ಮುಖ್ಯೋಪಾಧ್ಯಾಯ ರವೀಂದ್ರ ಪಾಟೀಲ ಶುಭವಾರ್ತೆ ತಿಳಿಸಿದ್ದಾರೆ.ಸಾವಿತ್ರಿ ಮಲ್ಲಪ್ಪ ಮಾಳಿ 600 ಅಂಕಗಳನ್ನು (96%)ಗಿಟ್ಟಿಸಿ ಶಾಲೆಗೆ ಮತ್ತು ಶೇಗುಣಶಿ ಪ್ರೌಢ ಶಾಲೆˌಶೇಗುಣಶಿ ಪರೀಕ್ಷಾ ಕೆಂದ್ರಕ್ಕೆ ಪ್ರಥಮ ಸ್ಥಾನ 

ಪಡೆದು ಕೀರ್ತಿಹಣತೆಯಾಗಿ ಶಾಲೆಯನ್ನು ಬೆಳಗಿದ್ಧಾಳೆ. ವರ್ಷಾ ರಮೇಶ ಬಡಿಗೇರ 580 ಅಂಕಗಳು(92.8%) ಪಡೆದು ಶಾಲೆಗೆ ದ್ವಿತೀಯ ಮತ್ತು ಪರೀಕ್ಷಾ ಕೇಂದ್ರಕ್ಕೆ ದ್ವಿತೀಯ ಸ್ಥಾನ ಹೊಂದಿ ಶಾಲೆಯ ಘನತೆ ವೃದ್ದಿಸಿದ್ದಾರೆ.ಸುಕನ್ಯಾ ಜಿನ್ನಪ್ಪ ಹರವಿ 573(91.68%) ಅಂಕಗಳನ್ನು ಸಂಪಾದಿಸಿ ಶಾಲೆಗೆ ಮತ್ತು ಪರೀಕ್ಷಾ ಕೇಂದ್ರಕ್ಕೆ ತೃತೀಯ ಸ್ಥಾನ ಪಡೆದು ಸಂತಸ ಇಮ್ಮಡಿಗೊಳಿಸಿದ್ದಾರೆ.ರೋಹಿಣಿ ಶಿವಪುತ್ರ ಶಿರಗುಪ್ಪಿ 571 ಅಂಕಗಳನ್ನು (91.36%)ಪಡೆದು  ಶಾಲೆಗೆ ನಾಲ್ಕನೆಯ ಸ್ಥಾನ ಪರೀಕ್ಷಾ ಕೇಂದ್ರಕ್ಕೆ ಐದನೆಯ ಸ್ಥಾನ ಪಡೆದು ಶಾಲೆಯ ಗೌರವದ ಠೆವಣಿಯನ್ನು ದುಪ್ಪಟ್ಟುಗೊಳಿಸಿದ್ದಾರೆ.

ಶಾಲೆಯ ಗುಣಮಟ್ಟದ ಸರಾಸರಿ ಫಲಿತಾಂಶ 82.07 ರಷ್ಟಾಗಿದೆ.ಪ್ರತಿ ವರ್ಷ ಉತ್ತಮ ಗುಣಮಟ್ಟದ ಎಸ್.ಎಸ್.ಎಲ್.ಸಿ ಫಲಿತಾಂಶ ಪಡೆಯುತ್ತಾ ಬಂದಿರುವ ಚಿಕ್ಕೂಡ ಸರಕಾರಿ ಪ್ರೌಢ ಶಾಲೆ ತಾಲೂಕಿನ ಶಿಕ್ಷಣ ಪ್ರೇಮಿಗಳ ಗಮನ ಸೆಳೆದಿದೆ.ಉತ್ತಮ ಫಲಿತಾಂಶ ಹೊರಹೊಮ್ಮಲು ಸ್ಫೂರ್ತಿ ತುಂಬಿದ ಮುಖ್ಯೋಪಾಧ್ಯಾಯರುˌ ಪರಿಶ್ರಮಿಸಿದ ಅನುಕರಣಾರ್ಹ ಶಿಕ್ಷಕರು ˌಸಾಧನೆಗೈದ ವಿದ್ಯಾರ್ಥಿಗಳನ್ನು ಎಸ್.ಡಿ.ಎಮ್.ಸಿ ಅಧ್ಯಕ್ಷ ಲಕ್ಷ್ಮಣ ಪಾಟೀಲ ಮತ್ತು ಸದಸ್ಯರು ಅಭಿನಂದಿಸಿ ಶುಭ ಹಾರೈಸಿದ್ದಾರೆ.ಗ್ರಾಮದ ಹಿರಿಯರುˌಜನ ಪ್ರತಿನಿಧಿಗಳುˌಯುವಕರುˌಅಕ್ಷರ ಪ್ರೇಮಿಗಳುˌಹಳೆಯ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿ ಹರ್ಷ ಹಂಚಿಕೊಂಡಿದ್ದಾರೆ.


ವರದಿ :ಡಾ. ವಿಲಾಸ ಕಾಂಬಳೆ 

ಹಾರೂಗೇರಿ

Image Description

Post a Comment

0 Comments