🙏🙏 *ಓಂ ಶ್ರೀ ಶಾರದಾ ಗುರುಭ್ಯೋ ನಮಃ* 🙏🙏
ಶೀರ್ಷಿಕೆ : *ಓ ನನ್ನ ನಲ್ಲೆ*
ಓ ನನ್ನ ನಲ್ಲೆ ಇಲ್ಲೇ ಇರುವೆನೆ
ನಿನ್ನ ಬಿಟ್ಟು ಎಲ್ಲಿಗೆ ಹೋಗುವೆನೆ
ನಿನ್ನ ಹೃದಯದಲ್ಲಿ ನೆಲೆಸಿ ರುವೆನೆ
ಬಾ ನನ್ನ ಮನದರಸಿ ನಿನ್ನ ಬಿಡುವೆನೆ
ಅಂದು ನೀ ಓರೇ ನೋಟ ಬೀರಿದಾಗ
ನಾನಾಡಿದ ಮಾತಿಗೆ ಮುಸಿ ಮುಸಿ ನಕ್ಕಾಗ
ಸನಿಹಕೆ ಬರಲು ಸನ್ನೆ ಮಾಡಿದಾಗ
ನಾ ಕಳೆದು ಹೋಗಿ ನಿಂತಲ್ಲೇ ನಿಲ್ಲದಾಗ
ಇಷ್ಟು ದಿನ ಯಾರಿಗೂ ನಾ ಬೇಡ ವಾಗಿದ್ದೆ
ನೀನೆ ಕಣ್ಣೋಟದಲ್ಲೇ ನನ್ನ ಕಲಕಿದ್ದೆ
ಮನವ ಕದ್ದು ಮನದಲ್ಲೇ ಮಾಡಿ ಗೆದ್ದಿದ್ದೆ
ನಿನ್ನ ರೂಪಿಗೆ ಅಂದೇ ಸೋತು ಶರಣಾಗಿದ್ದೆ
ನನ್ನವಳಾಗಲು ನೀ ಬರುವೆಯ ಮನೆಯೊಳಗೆ
ನಿನಗಾಗಿ ಕಾದು ಕುಳಿತಿರುವೆ ಮನಮಂದಿರದೊಳಗೆ
ಬಂದು ನನ್ನ ಬಾಳ ಸಂಗಾತಿ ಆಗು ಎನಗೆ
ಆಗಲೇ ನನ್ನ ಜನ್ಮ ಸಾರ್ಥಕ ವಾಗುವುದೆನಗೆ.
✍️ *ಮಳೆಬಿಲ್ಲು ಲೀಲಾ ಗುರುರಾಜ್* ತುಮಕೂರು.
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments