*ಕಲಾಪ್ರೇಮಾಸುರˌಸಹಜಾಭಿನಯ ಚತುರ ಶೀತಲರಾಜ್ ನಾಗನೂರ*
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿಯ ಸಹಜಾಭಿನಯ ಚತುರವೀರ ಕಲಾವಿದ ಶೀತಲರಾಜ್ ನಾಗನೂರ ಅಪರೂಪದ ಪ್ರೇಮಾಸುರ ಚಲನಚಿತ್ರದ ನಾಯಕ ನಟ. ಅಪ್ಪಾಸಾಬ ನಾಗನೂರ ವಿಮಲಾ ನಾಗನೂರ ಅವರ ಸಿರಿ ಉದರದಲ್ಲಿ 12-7-1990 ರಲ್ಲಿ ಹಾರೂಗೇರಿಯಲ್ಲಿ ಜನಿಸಿದ ಶೀತಲರಾಜ್ ನಾಯಕ ನಟನಾಗಿ ಕಲಾ ಪ್ರಪಂಚದ ಗಮನ ಸೆಳೆದದ್ದು ಇತಿಹಾಸ.ನಟನಾ ದಿಗ್ಗಜ ರಜನಿಕಾಂತˌ ಕೆ.ಜಿ.ಎಫ್ ಖ್ಯಾತಿಯ ನಟ ಯಶ್ ಅವರನ್ನು ಹೊಲುವ ಶೀತಲರಾಜ್ ಅವರಿಗೆ ಅಭಿನವ ರಜನಿಕಾಂತ ಎಂದು ಕಲಾರಸಿಕರು ಅಭಿಮಾನದಿಂದ ಹೇಳುತ್ತಾರೆ.ಪ್ರಾಥಮಿಕ ಶಿಕ್ಷಣವನ್ನು ಹಾರೂಗೇರಿಯ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಪೂರೈಸಿದ ಇವರು ವಿಜಯಪೂರದ ವಿ.ಭ.ದರಬಾರ ಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿ ಹಾರೂಗೇರಿಯ ಎಸ್.ವಿ.ಈ.ಎಸ್ ಪ.ಪೂ ಕಾಲೇಜಿನಲ್ಲಿ ಪಿ.ಯು.ಸಿ ವ್ಯಾಸಂಗ ಕೈಗೊಂಡು ಸ್ವಾಮಿ ವಿವೇಕಾನಂದ ಸಂಸ್ಥೆಯಲ್ಲಿ ಬಿ.ಸಿ.ಎ ಪದವಿ ಪೂರೈಸಿದ ಇವರು ಪ್ರಖ್ಯಾತ ನಟ ಸುದೀಪರವರ ಸ್ಪರ್ಶ ಚಲನಚಿತ್ರದ ಬ್ಯಾನರ್ ನೋಡಿದಾಗಿನಿಂದ ಅವರ ಹಾಗೆ ಕಲಾಕಾರನಾಗಿ ಮಿಂಚಬೇಕೆಂಬ ಆಸೆ ಮೊಳಕೆಯೊಡೆದು ಹುಲುಸಾಗಿ ಚಿಗುರಿತು.
ಅಂದಿನಿಂದ ಮನದಲ್ಲಿ ಅದೇ ರಂಗು ರಂಗಿನ ಗುಂಗು ತುಂಬಿ ತುಳುಕಿತು.ಅಭಿನಯದ ಹುಚ್ಚು ಹಚ್ಚಿಕೊಂಡ ಶೀತಲರಾಜ್ ಅವರಿಗೆ ಆ ದಾರಿ ಗಗನ ಕುಸುಮವಾದಾಗ ಅಗ್ರಜ ಕುಂತಿನಾಥ ನಾಗನೂರ ಬೆನ್ನೆಲುಬಾಗಿ ನಿಂತು ಬೆಂಗಳೂರಿನ ಕಲಾಜಗತ್ತು ದರ್ಶನಕ್ಕೆ ದಾರಿದೀಪವಾದರು.
ಆರ್ಥಿಕ ಸಂಕಷ್ಟದ ಕಾಲಘಟ್ಟದಲ್ಲಿ ಕಲೋಪಾಸನೆ ಕೈಗೆಟುಕದ ಸಮಯದಲ್ಲಿ ಅಣ್ಣನ ನೆರಳು ಮುನ್ನಡೆಯಲು ಸಾಧ್ಯವಾಗಿಸಿತು.ಹಿಡಕಲ್ಲದ ಆಪ್ತಮಿತ್ರ ಭೀಮು ಬೆಳಗಲಿ ಅಣ್ಣ ಕುಂತಿನಾಥ ನಾಗನೂರರವರು ಕಲಾಪಯಣದ ಶ್ರೆಯೋಭಿವೃದ್ಧಿ ಬಯಸುವ ಪರೋಪಕಾರಿ ಜೀವರತ್ನಗಳೆಂದು ಶೀತಲರಾಜ್ ಮನದುಂಬಿ ನೆನೆಯುತ್ತಾರೆ.
ನಟನಾ ಪ್ರಪಂಚದ ಪ್ರೇಮಾಸುರ ಶೀತಲರಾಜ್ ನಾಗನೂರ ದೈವಲೀಲಾ ಅಭಿನಯ ವಿಶಾರದರು.
ತರಬೇತಿ ಪಡೆಯದೇ ತಮ್ಮಷ್ಟಕ್ಕೆ ತಾವು ಅಭಿನಯವನ್ನು ಕೈವಶ ಮಾಡಿಕೊಂಡು ದೈವದತ್ತ ಕಲಾವಲ್ಲಭರಾಗಿರುವುದು ವಿಶೇಷ.ಬಹಾದ್ದೂರˌಭಜರಂಗಿˌಲವ್ ಇನ್ ಮಂಡ್ಯ ಚಲನಚಿತ್ರಗಳ ಶೂಟಿಂಗ ಸೆಟ್ ಗಳಲ್ಲಿ ಕಾರ್ಯನಿರ್ವಹಿಸಿ ಅನುಭವ ಹೊಂದಿದ ಇವರು ನಟ ಧುೃವಸರ್ಜಾರವರ ಜೊತೆ ಆಪ್ತ ಒಡನಾಟವಿರಿಸಿಕೊಂಡಿದ್ದಾರೆ.ನೃತ್ಯ ನಿರ್ದೇಶಕ (ಕೊರಿಯೋಗ್ರಾಫರ್) ಪ್ರೇಮರಕ್ಷಿತ್ ಅವರು ಶೀತಲರಾಜ ಅವರ ಕುಣಿತದ ಹೆಜ್ಜೆಗಳನ್ನು ಬಹುವಾಗಿ ಮೆಚ್ಚಿಕೊಂಡಿದ್ದು ಇವರ ಕುಣಿತದ ಚೆಲುವು ಒಲವುಗಳಿಗೆ ನಿದರ್ಶನವಾಗಿದೆ.
ಸಂಗೀತ ಆಲಿಸುವುದುˌಹಾಡುವುದುˌಗೆಳೆಯರೊಂದಿಗೆ ಮಾತುಕತೆˌಪುಸ್ತಕಗಳನ್ನು ಓದುವುದುˌಶರೀರ ಸೌಂದರ್ಯ ಸ್ಥಿರತೆಗಾಗಿ ಜಿಮ್ ಗೆ ಹೋಗುವುದು ಶೀತಲರಾಜ್ ರವರ ದಿನಚರಿಯ ಸಂಗಾತಿಗಳಾಗಿವೆ.ಸ್ವಾವಲಂಬಿ ಬದುಕು ಪ್ರೀತಿಸುವ ನಟ ಶೀತಲರಾಜ್
ಸಿನೆಮಾ ಮತ್ತು ಕೃಷಿಗೆ ಜೀವನ ಮುಡಿಪಾಗಿಡುವುದಾಗಿ ಪ್ರತಿಜ್ಞೆಗೈದಿದ್ದಾರೆ.ಸಹಜಾಭಿನಯ ಉಪಾಸಕ ಶೀತಲರಾಜ್ ನಾಗನೂರ ಹಾರೂಗೇರಿ ಊರಿನ ಹೆಮ್ಮೆಯ ಸುಪುತ್ರರು.ಇವರು ಕಲಾವಲಯದಲ್ಲಿ ಉತ್ತರೊತ್ತರ ಎತ್ತರೆತ್ತರ ಬೆಳೆಯಲಿˌಬೆಳೆಸಲಿˌಬೆಳಗಲಿ. ಕಲಾಪ್ರೇಮಾಸುರ ಶೀತಲರಾಜ್ ನಾಗನೂರ ಅವರನ್ನು ಅಭಿನಂದಿಸಿ ಹೆಮ್ಮೆˌಅಭಿಮಾನ ಪ್ರಕಟಪಡಿಸಿ ಪ್ರೋತ್ಸಾಹಿಸುವವರು ಈ (9008080208) ದೂರವಾಣಿಗೆ ಸಂಪರ್ಕಿಸಬಹುದಾಗಿದೆ.
ಲೇಖಕರು: ಶ್ರೀ ರವೀಂದ್ರ ಪಾಟೀಲ
ಅಧ್ಯಕ್ಷರುˌಕನ್ನಡ ಸಾಹಿತ್ಯ ಪರಿಷತ್ತುˌರಾಯಬಾಗ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments