ಮಹಾವೀರನ ಚಿಂತನೆಗಳು ಮೌಲ್ಯ ಪ್ರತಿಪಾದನೆಯ ನೆಲೆಗಳು : ಪ್ರೊ.ಎ.ಜೆ.ಪಾಟೀಲ್
ಚಿಕ್ಕೋಡಿ: ಪ್ರಪಂಚದ ಧರ್ಮಗಳಲ್ಲಿ ಜೈನ ಧರ್ಮವು ಅತ್ಯಂತ ಪ್ರಾಚೀನವಾದುದ್ದು. ಜೈನ ಧರ್ಮದ 24ನೇ ತೀರ್ತನ್ಕರಾದ ಭಗವಾನ್ ಮಹಾವೀರನು ಬೋಧಿಸಿದ ಪಂಚಶೀಲ ತತ್ವಗಳು ಪ್ರತಿಯೊಬ್ಬ ವ್ಯಕ್ತಿಯ ಜೀವನ ಮೌಲ್ಯಗಳು ಆದರ ಸ್ತಂಭಗಳಾಗಿವೆ ಎಂದು ಪ್ರೊ.ಎ.ಜೆ.ಪಾಟೀಲ್ ತಿಳಿಸಿದರು.
ಚಿಕ್ಕೋಡಿ ತಾಲೂಕಿನ ಬೇಡಕಿಹಾಳದ
ಲಠ್ಠೆ ಶಿಕ್ಷಣ ಕ್ಷಣ ಸಂಸ್ಥೆಯ ಶ್ರೀಮತಿ ಕುಸುಮಾವತಿ ಮಿರಜಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮತ್ತು ಐಕ್ಯೂಎಸಿ, ಸಾಂಸ್ಕೃತಿಕ ಸಮಿತಿಯ ವತಿಯಿಂದ ಆಯೋಜಿಸಿದ ಭಗವಾನ್ ಮಹಾವೀರನು ಜಯಂತಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದರು.
ಜೈನ ಧರ್ಮದ ಪಂಚಶೀಲ ತತ್ವಗಳಾದ ಸತ್ಯ, ಅಹಿಂಸೆ, ಅಪರಿಗ್ರಹ, ಅಸ್ತೇಯ, ಬ್ರಹ್ಮಚಾರ್ಯಯವನ್ನು ಪ್ರತಿಯೊಬ್ಬ ಮನುಷ್ಯರು ಅನುಸರಿಸಬೇಕು. ಆಗ ಈ ಸಮಾಜದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸುಂದರವಾದ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದು ತಿಳಿತ್ತಾ ಭಗವಾನ್ ಮಹಾವೀರನ ಜನ್ಮ ವೃತ್ತಾಂತದ ಹಲವಾರು ಮಜಲುಗಳನ್ನು ತಿಳಿಸುತ್ತಾ ಮಹಾವೀರನ ಪ್ರತಿಪಾದಿಸಿದ ತ್ರಿ ರತ್ನಗಳನ್ನು ತಿಳಿಸಿದರು.
ಸಮ್ಯಾಕ್ ಜ್ಞಾನ, ಸಮ್ಯಾಕ್ ದರ್ಶನ, ಸಮ್ಯಾಕ್ ಚಾರಿತ್ರ್ಯ ಇವುಗಳು ತ್ರಿರತ್ನಗಳಾಗಿವೆ. ಈ ತ್ರಿರತ್ನಗಳನ್ನು ಪ್ರತಿಯೊಬ್ಬರು ಧರ್ಮಾತೀತವಾಗಿ ಮತ್ತು ಜಾತ್ಯತೀತವಾಗಿ ಅಳವಡಿಸಿಕೊಂಡಾಗ ಉತ್ತಮವಾದ ದರ್ಶನವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಭಗವಾನ್ ಮಹಾವೀರನ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಸ್ಥಳೀಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಇಂದ್ರಜಿತ್ ಪಿ ಪಾಟೀಲ್ ಅವರು ಮಾತನಾಡುತ್ತ ಮಹಾವೀರನ ಚಿಂತನೆಗಳು ಮತ್ತು ತತ್ವಾದರ್ಷಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ತಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ನಡೆಸಬೇಕೆಂದು ಕರೆ ನೀಡಿದರು.
ಪ್ರಾಂಶುಪಾಲರಾದ ಕಿರಣ್ ಬಿ ಚೌಗುಲೆ ಪ್ರಾಸ್ತಾವಿಕ ಮತ್ತು ಸ್ವಾಗತ ಕೋರಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಹೊಂಬಯ್ಯ ವಂದಿಸಿದರು ಗುಮಾಸ್ತರಾದ ಪ್ರಶಾಂತ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಆಡಳಿತ ಮಂಡಳಿಯ ವಿವಿಧ ಅಂಗ ಸಂಸ್ಥೆಗಳ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಪ್ರೊ.ಮಲ್ಲಿಕಾ, ಪ್ರೊ.ಚೈತ್ರಾ
,ಪ್ರೊ.ಎ.ಡಿ.ಚೌಗಲೆ,ಡಾ.ಸುತಾರ, ಡಾ.ಸವದಿ, ಡಾ.ಮೊಕಾಶಿ, ಪ್ರೊ.ವಿನಾಯಕ, ಪ್ರೊ.ಇಟ್ನಾಳ್, ಪ್ರೊ.ದೇಸಾಯಿ, ಡಾ.ಸವದಿ ಉಪಸ್ಥಿತರಿದ್ದರು.
ವೇದಿಕೆಯ ಕಾರ್ಯಕ್ರಮಕ್ಕೆ ಮುನ್ನ ಮಹಾವೀರನ ಭಾವಚಿತ್ರಕ್ಕೆ ಸದಸ್ಯರಾದ ಟಿ ಎಸ್ ಚೌಗುಲೆ, ಪುಷ್ಪ ನಮನ ಸಲ್ಲಿಸಿದರು ಈ ಸಂದರ್ಭದಲ್ಲಿ ಸ್ಥಳೀಯ ಮಂಡಳಿ ಸದಸ್ಯರು, ಮಹಾವಿದ್ಯಾಲಯದ ಪ್ರಾಧ್ಯಾಪಕ ಮತ್ತು ಪ್ರಾಧ್ಯಾಪಕಿತರು ಉಪಸ್ಥಿತರಿದ್ದರು.
ವರದಿ :ಡಾ. ವಿಲಾಸ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments