ನಿನ್ನ ಚೆಲುವೇ ಸ್ವರ್ಗ...

 ನಿನ್ನ ಚೆಲುವೇ ಸ್ವರ್ಗ...



ಉರಿವ ಬಿಸಿಲಿಗೆ 

ತಂಪು ಗಾಳಿ ಬೀಸಿದೆ 

ವಿರಹದಿ ಮಣ್ಣಿಗೆ 

ಮಳೆ ಹನಿ ಹನಿಸಿದೆ

ನಿನ್ನ ಚೆಲುವಿಗೆ 

ಎಷ್ಟು ಸ್ವರ್ಗ ಹೇಳೇ ಪ್ರಕೃತಿ!


ದಣಿದ ಜೀವಕೆ 

ಬೊಗಸೆಗಣ್ಣಿನ ನೋಟವಿರಿಸಿ

ಅಂತರಂಗದ ಮನಕೆ 

ಮಳೆಬಿಲ್ಲ ಮೂಡಿಸಿ 

ಮೈತುಂಬ ಪ್ರೀತಿಯ ಹರಿಸಿದ

ನಿನ್ನ ಪ್ರೀತಿಯ ಚೆಲುವೆಷ್ಟು ಸ್ವೀಕೃತಿ!


ಮಳೆಯ ಹನಿಗೆ

ತಂಪು ಹರಿಸಿದೆ ಇಳೆಯು

ಸಂಜೆ ಗಾಳಿಗೆ

ಕಂಪು ಸೂಸಿದೆ ವನವು

ಹಳ್ಳ ಹರಿದಿದೆ 

ಕೇಳುತಲಿದೆ ಸಂಗೀತವು!


ಇಂಥ ಹೊತ್ತಲ್ಲಿ

ನಿನ್ನ ನೆನಪಲ್ಲಿ

ಮನವು ಬಯಸದೆ ನಿನ್ನನು!

ನಿನ್ನ ಮಧುರ

ಒಲವು ತಬ್ಬಿದೆ

ಮನವು ಮರೆವುದೆ ನಿನ್ನನು!


ಉದಂತ ಶಿವಕುಮಾರ್

ಕವಿ ಮತ್ತು ಲೇಖಕ

ಜ್ಞಾನ ಭಾರತಿ ಅಂಚೆ

ಬೆಂಗಳೂರು -೫೬೦೦೫೬

ಮೋಬೈಲ್ ನಂ: 9739758558

Image Description

Post a Comment

0 Comments