*ಬೇವೂರ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ*
ಬೇವೂರ : ಯುವಕರು ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ದೇಶದ ಭವಿಷ್ಯವನ್ನು ರೂಪಿಸಲು ಆರೋಗ್ಯಯುತ ಜೀವನ ನಡೆಸಬೇಕು ಎಂದು ಬಾಗಲಕೋಟೆಯ ಐ.ಸಿ.ಟಿ.ಸಿ ಕೌನ್ಸಿಲರ ಸಾವಿತ್ರಿ ಕೊಣ್ಣೂರ ಹೇಳಿದರು. ಅಧ್ಯಕ್ಷತೆ ವಹಿಸಿದ ಎಸ್.ಎಮ್.ಹೊಟ್ಟಿಗೌಡರ ಯುವಕರು ದುಶ್ಚಟಗಳಿಂದ ದೂರವಿರಬೇಕು.ಸಮಾಜದ ಆಸ್ತಿಗಳಾಗಿ ಬೆಳೆಯಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಜಗದೀಶ ಭೈರಮಟ್ಟಿ, ಹಿರಿಯ ಉಪನ್ಯಾಸಕರಾದ ಬಿ.ಬಿ.ಬೇವೂರ. ಎನ್.ಎಸ್.ಎಸ್ ಕಾಯ೯ಕ್ರಮ ಅಧಿಕಾರಿ ಜಿ.ಎಸ್.ಗೌಡರ ಉಪಸ್ಥಿತರಿದ್ದರು. ಪ್ರಬಂಧ ಸ್ಪರ್ಧೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ವಿತರಣೆ ಮಾಡಲಾಯಿತು. ಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳು ಸಮಾರಂಭದ ವಿವಿಧ ಹಂತಗಳನ್ನು ನೇರವೇರಿಸಿಕೊಟ್ಟರು.
ವರದಿ :ಡಾ. ವಿಲಾಸ ಕಾಂಬಳೆ
ಹಾರೂಗೇರಿ
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments