*ಅಧ್ಯಾತ್ಮ ಶಿಖರ*

 *ಎಲ್ಲರಿಗೂ ಸ್ವಾಮಿ ವಿವೇಕಾನಂದರ ಜಯಂತೋತ್ಸವದ ಹಾರ್ದಿಕ ಶುಭಾಶಯಗಳು*.🙏🏻🙏🏻💐💐


*ಅಧ್ಯಾತ್ಮ ಶಿಖರ*



ವೀರ ಅಪ್ರತಿಮ ಸನ್ಯಾಸಿ 

ವಿಶೇಷ ಗುಣ ಸಂಪನ್ನ

ವಿದ್ಯೆ ಬುದ್ಧಿಯೊಂದಿಗೆ ಜಗಗೆದ್ದ 

ವಿರಳಾತಿ ವಿರಳ ಧೀಮಂತ.


ವಿವೇಕದಿಂದ ತಾ ನಡೆದು 

ವಿಖ್ಯಾತ ಶಾಂತಿ ದೂತನಾದ

ವಿವೇಕವ ಜಗಕೆ ತಿಳಿಸಲೆಂದು

ವಿದ್ವಾನ್ ಸತ್ಪುರುಷನಾಗಿ ಬೆಳೆದ‌.


ವಿವೇಕವ ಧಾರೆ ಎರೆದು

ವಿಶ್ವಕ್ಕೆ ಹೊಸ ಸಂದೇಶ ಸಾರಿದ

ವಿವೇಚನೆಯ ನಡೆ ನುಡಿಯೇ

ವಿಶ್ವ ಮಾನವತೆ ತತ್ವ ಎಂದ.


ವಿದೇಶದಲ್ಲಿ ಸಹೋದರತ್ವ ಬಿತ್ತಿ

ವಿಶ್ವಾಸದ ಮನೆ ಮಾತಾದ.

ವಿವೇಕವಾಣಿ ಯುವಕರಲ್ಲಿ ಬಿತ್ತಿ

ವಿದ್ವತ್ತಿನ ಗುರಿ ಸಾರ ತೋರಿದ.


ವಿಶಿಷ್ಟ ಸಿದ್ಧಾಂತದ ಸೆಲೆಯಾಗಿ

ವಿನೂತನ ಆಧ್ಯಾತ್ಮದ ಹೊಳೆ ಹರಿಸಿದ

ವಿದ್ವಾಂಸನಾಗಿ ಧ್ಯಾನ ಮಾರ್ಗತೋರಿ

ವಿಶ್ವಕ್ಕೆ ಸ್ವಾಮಿ ವಿವೇಕಾನಂದ ತಾನಾದ.


      ✍🏻 ಡಾ. ಮಹೇಂದ್ರ ಕುರ್ಡಿ

Image Description

Post a Comment

0 Comments