ಜೀತ
ಬಾಲಕರೊ ನಾವು
ಬಾಲ ಕಾರ್ಮಿಕರೊ
ಜೀತ ಬಾಲಕರೊ||
ಎಣ್ಣೆ ಕಾಣದ ತಲೆಯ
ಮೇಲೆ ಕಲ್ಲನ್ನೊತ್ತವರೊ
ಹರಿದ ಬಟ್ಟೆಯಲ್ಲೇ
ಕತ್ತಲನು ಕಳೆದವರೊ
ಬಿಸಿಲು ಚಳಿ ಎನ್ನದೆ
ಮಾಲೀಕನೋಲವ ಉತ್ತವರೊ
ಅಪ್ಪ-ಅಮ್ಮನ ಪ್ರೀತಿ
ಕಾಣದೆ ಕಣ್ಣೀರಾದವರೊ
ಬಡತನವೇ ಶಾಪವಾಗಿ
ಅನಕ್ಷರಸ್ಥರಾಗಿ ಉಳಿದವರೊ
ಹಸಿವ ನೀಗಿಸಲು
ಅನ್ನಕ್ಕಾಗಿ ಅಲೆದವರೊ
ಕರುಣೆ ಇಲ್ಲದವರ ಮುಂದೆ
ಕೈಯೊಡ್ಡಿ ನಿಂತವರೊ
ಎಲ್ಲರೂ ತಿಂದುಂಡ ಮೇಲೆ
ಅಳಿದುಳಿದನು ತಿಂದವರೊ
ನಾವು ಬಾಲಕರೊ,
ಬಾಲ ಕಾರ್ಮಿಕರೊ
ಜೀತ ಬಾಲಕರೊ ||
ಉದಂತ ಶಿವಕುಮಾರ್
ಕವಿ ಮತ್ತು ಲೇಖಕ
ಜ್ಞಾನ ಭಾರತಿ ಅಂಚೆ
ಬೆಂಗಳೂರು -560056
ಮೊಬೈಲ್ ನಂ: 9739758558
%20(1200%20%C3%97%20300%20px)%20(1200%20%C3%97%20500%20px)%20(1200%20%C3%97%20400%20px)%20(1).gif)
0 Comments